ವಿಧುಶೇಖರಭಾರತಿ ಸ್ವಾಮೀಜಿ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದರು. ತೋರಣ ಗಣಪತಿ, ಶಕ್ತಿಗಣಪತಿ, ಶಂಕರ ದೇವಾಲಯದಲ್ಲಿ ಪೂಜೆ ನೇರವೆರಿಸಿದರು. ರಾತ್ರಿ ಚಂದ್ರಮೌಳೇಶ್ವರ ಸ್ವಾಮೀಗೆ ವಿಶೇಷ ಪೂಜೆ ಸಲ್ಲಿಸಿದರು. ವರ್ಧಂತಿ ಮಹೋತ್ಸವದ ಸಲುವಾಗಿ ಗುರುನಿವಾಸವನ್ನು ವಿವಿಧ ಪುಷ್ಪಗಳಿಂದ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ವಿವಿಧೆಡೆಯಿಂದ ಬಂದಿದ್ದ ಭಕ್ತರು ವಸ್ತ್ರ, ಹಣ್ಣು, ಪುಷ್ಪಕಾಣಿಕೆ ಸಮರ್ಪಿಸಿ ಆಶಿರ್ವಾದ ಪಡೆದರು.