ಕಡೂರು: ಕಾಗಿನೆಲೆಯಿಂದ ಆರಂಭಗೊಂಡ ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆ ಗುರುವಾರ ಕಡೂರು ಪಟ್ಟಣಕ್ಕೆ ಬಂದ ಸಂದರ್ಭದಲ್ಲಿ ಚಂದ್ರಮೌಳೇಶ್ವರ ದೇವಾಲಯದ ಬಳಿ ತಾಲ್ಲೂಕು ಕುರುಬ ಸಮಾಜದ ಮುಖಂಡರು ಭಕ್ತಿಯಿಂದ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಥಯಾತ್ರೆಯ ಸಂಸ್ಥಾಪಕ ಓಂ ಕೃಷ್ಣಮೂರ್ತಿ, ‘ಕನಕದಾಸರು ನಮ್ಮ ಭಾರತ ಕಂಡ ಮಹಾನ್ ಚೇತನ. ಅವರ ಸ್ಮರಣೆಯಲ್ಲಿ ಪ್ರತಿವರ್ಷವು ಈ ಕನಕ ಸದ್ಭಾವನಾ ಯಾತ್ರೆಯನ್ನು ಆಯೋಜಿಸಲಾಗುತ್ತದೆ. ಸರ್ವಧರ್ಮಿಯರು ಈ ರಥಯಾತ್ರೆಯಲ್ಲಿ ಭಾಗವಹಿಸುವುದು ಸಂತಸ ತಂದಿದೆ’ ಎಂದರು.

ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಕೆ.ಎಚ್.ಎ. ಪ್ರಸನ್ನ ಮಾತನಾಡಿ, ‘ರಥಯಾತ್ರೆ ಕಡೂರು ಪಟ್ಟಣದಲ್ಲಿ ವಾಸ್ತವ್ಯ ಮಾಡಲಿದ್ದು, ದಾಸ ಸಾಹಿತ್ಯದಲ್ಲಿ ಅತ್ಯಂತ ಹೆಚ್ಚಿನ ಸಾಧನೆ ಮಾಡಿ ನಮ್ಮೆಲ್ಲರಿಗೂ ಆದರ್ಶಪ್ರಾಯರಾದ ಕನಕದಾಸರ ಸ್ಮರಣೆ ಮಾಡುವುದು ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ಆ ಮಹಾನ್ ಚೇತನ ಪ್ರತಿಯೊಬ್ಬರಿಗೂ ಸೇರಿದವರು’ ಎಂದು ನುಡಿದರು.

ರಥಯಾತ್ರೆಯಲ್ಲಿ 530ನೇ ಕನಕ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ವೈ.ಎಸ್. ತಿಪ್ಪೇಶ್, ಸಮಾಜದ ಮುಖಂಡರಾದ ಭಂಡಾರಿ ಶ್ರೀನಿವಾಸ್, ಹೂವಿನಗೋವಿಂದಪ್ಪ, ಮಾಜಿ ಅಧ್ಯಕ್ಷ ಕೆ.ಎಸ್. ರಮೇಶ್, ಕೆ.ಎಸ್. ಆನಂದ್, ಸಾವಿತ್ರಿಗಂಗಣ್ಣ, ಹಾಲಪ್ಪ, ಕೆ.ಎಚ್. ರಂಗನಾಥ್ , ಕದಂಬ ವೆಂಕಟೇಶ್, ಎನ್.ಹೆಚ್. ನಂಜುಂಡಸ್ವಾಮಿ, ಸಾವಿತ್ರಿ ಗಂಗಣ್ಣ, ಕೆ.ಜಿ. ಶ್ರೀನಿವಾಸ್ ಮೂರ್ತಿ, ಎಂ. ಸೋಮಶೇಖರ್, ಯರದಕೆರೆ ರಾಜಣ್ಣ, ಕೆ.ಜಿ. ಲೋಕೇಶ್ವರ್, ಡಿಶ್ ಮಂಜಣ್ಣ, ರವಿ ಇದ್ದರು.

ಜ್ಯೋತಿ ರಥಯಾತ್ರೆಯು ಪಟ್ಟಣದ ಚಂದ್ರಮೌಳೇಶ್ವರ ದೇವಾಲಯದಿಂದ ಡೊಳ್ಳುಕುಣಿತ ಕಲಾ ತಂಡದೊಂದಿಗೆ ಮೆರವಣಿಗೆ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.