ಹೊಸದುರ್ಗ: ತಾಲ್ಲೂಕಿನ ಬೆಲಗೂರು ಗ್ರಾಮದಲ್ಲಿ ₹ 3.5 ಕೋಟಿ ವೆಚ್ಚದಲ್ಲಿ ಭಾರತಾಂಬೆ ತೇರು ನಿರ್ಮಾಣಗೊಂಡಿದೆ.

ಗ್ರಾಮದ ಮಾರುತಿ ಪೀಠದ ಅವಧೂತ ಬಿಂದು ಮಾದವಶರ್ಮ ಸ್ವಾಮೀಜಿ ಮಾರ್ಗದರ್ಶನಲ್ಲಿ ಈ ತೇರು ನಿರ್ಮಾಣವಾಗಿದೆ. ಇಲ್ಲಿನ ಐತಿಹಾಸಿಕ ವೀರಪ್ರತಾಪ ಆಂಜನೇಯ ಹಾಗೂ ಲಕ್ಷ್ಮೀನಾರಾಯಣ ಸ್ವಾಮಿಯ ಈ ಬೃಹತ್ ರಥಕ್ಕೆ ಭಾರತಾಂಬೆ ತೇರು ಎಂದು ಹೆಸರಿಡಲಾಗಿದೆ. 59 ಅಡಿ ಎತ್ತರ, 21 ಅಡಿ ಅಗಲ ಹಾಗೂ ಸುಮಾರು 75 ಸಾವಿರ ಕೆ.ಜಿ ತೂಕವಿರುವ ಈ ರಥಕ್ಕೆ ಸಾಗುವಾನಿ, ಹೊನ್ನೆ ಮತ್ತು ಕಿರಾಲುಬೋಗಿ ಮರಗಳನ್ನು ಉಪಯೋಗಿಸಲಾಗಿದೆ. ಉಡುಪಿಯ ರಾಜಶೇಖರ್ ಹೆಬ್ಬಾರ್ ಸೇರಿ 40 ಮಂದಿ ಶಿಲ್ಪಿಗಳು ಕೆತ್ತನೆ ಕಾರ್ಯ ಮಾಡಿದ್ದಾರೆ.

ಈ ತೇರಿನಲ್ಲಿ ದೇಶಕ್ಕಾಗಿ ದುಡಿದಿರುವ ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಕರು, ದಾಸಶ್ರೇಷ್ಠರು, ರಾಜರು, ಸ್ವಾತಂತ್ರ್ಯ ಹೋರಾಟಗಾರರು, ದೇಶಭಕ್ತರು, ಶಿವಶರಣರು, ಅವಧೂತರು, ಸಿದ್ಧರು, ಮುನಿಗಳು, ಸಾಧು–ಸಂತರು, ಕಲಾವಿದರು, ಕವಿಗಳು, ಸಾಹಿತಿಗಳು, ವಿದ್ವಾಂಸರು, ವಿಜ್ಞಾನಿ, ಎಂಜಿನಿಯರ್, ಕಲಾವಿದರು ಸೇರಿ ಸುಮಾರು 221 ಮಹನೀಯಯರ ಉಬ್ಬು ಶಿಲ್ಪಗಳನ್ನು(ವಿಗ್ರಹ) ಅಳವಡಿಸಲಾಗಿದೆ. ಇದು ಅಪ್ಪಟ ರಾಷ್ಟ್ರಪ್ರೇಮದ ತೇರು ಆಗಿದ್ದು, ಇಡೀ ದೇಶಕ್ಕೆ ಮಾದರಿಯಾಗಿದೆ.

‘ಈ ತೇರಿನಲ್ಲಿ 4 ದ್ವಾರಗಳಿವೆ. ಮೊದಲನೇಯದರಲ್ಲಿ ಲಕ್ಷ್ಮೀನಾರಾಯಣ, ಎರಡನೇಯದರಲ್ಲಿ ಭಾರತಾಂಬೆ, ಮೂರನೇಯದರಲ್ಲಿ ಸೀತಾ, ರಾಮ, ಲಕ್ಷ್ಮಣ, ಆಂಜನೇಯ ಹಾಗೂ ನಾಲ್ಕಬನೇಯದರಲ್ಲಿ ಬಿಂದು ಮಾಧವಶರ್ಮ ಅವಧೂತರ ವಿಗ್ರಹಗಳಿವೆ. ಅಪರೂಪದ ಈ ತೇರಿನಲ್ಲಿ ಒಂದು ಪ್ರಧಾನ ಕಳಶ, 33 ಉಪಕಳಶ, 2 ಗುಮ್ಮಟ, 12 ಆನೆಗಳು, 24 ಕಂಬಗಳು, 365 ಗಂಟೆಗಳು ಇವೆ. ಈ ರಥ ಎಳೆಯಲು ಸುಮಾರು 1 ಸಾವಿರ ಜನ ಅವಶ್ಯಕ’ ಎಂದು ಶಿಲ್ಪಿ ರಾಜಶೇಖರ್ ಹೆಬ್ಬಾರ್ ವಿವರಿಸಿದರು.

ಡಿ.9ರ ಸೋಮವಾರ ಬೆಳಿಗ್ಗೆ 11.30ಕ್ಕೆ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಲೋಕಾರ್ಪಣೆ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.