ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಜ್ ಯಾತ್ರೆಗೆ ತೆರಳಿದ್ದ ಹಿರಿಯೂರಿನ ಮಹಿಳೆ ಸಾವು

Published 25 ಜೂನ್ 2024, 15:44 IST
Last Updated 25 ಜೂನ್ 2024, 15:44 IST
ಅಕ್ಷರ ಗಾತ್ರ

ಹಿರಿಯೂರು: ಪತಿಯೊಂದಿಗೆ ಹಜ್ ಯಾತ್ರೆಗೆ ತೆರಳಿದ್ದ ನಗರದ ವೇದಾವತಿ ಬಡಾವಣೆಯ ಮಹಿಳೆಯೊಬ್ಬರು ಆರೋಗ್ಯದಲ್ಲಿ ಏರುಪೇರು ಉಂಟಾಗಿ ಮೃತಪಟ್ಟಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಬೆಸ್ಕಾಂ ನಿವೃತ್ತ ನೌಕರ ರಫೀಕ್ ಅಹಮದ್ ಅವರ ಪತ್ನಿ ಷಾಕಿರಾ ಬಾನು (69) ಮೃತಪಟ್ಟವರು. 

ಅವರಿಗೆ ಪುತ್ರ, ಮೂವರು ಪುತ್ರಿಯರು ಇದ್ದಾರೆ. ಸೋಮವಾರ ಮೆಕ್ಕಾದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮೇ 10ರಂದು ರಫೀಕ್ ಅಹಮದ್ ದಂಪತಿ ಯಾತ್ರೆಗೆ ತೆರಳಿದ್ದರು. ಜೂನ್ 23 ರಂದು ರಾತ್ರಿ 12 ಗಂಟೆಯ ವಿಮಾನದಲ್ಲಿ ಅವರು ಬೆಂಗಳೂರಿಗೆ ವಿಮಾನ ಹತ್ತಬೇಕಿತ್ತು. ರಾತ್ರಿ 10 ಗಂಟೆ ಸಮಯದಲ್ಲಿ ವಿಮಾನ ನಿಲ್ದಾಣಕ್ಕೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ಇದ್ದಕ್ಕಿದ್ದಂತೆ ಅನಾರೋಗ್ಯ ಉಂಟಾಗಿ ಷಾಕಿರಾಬಾನು ಮೃತಪಟ್ಟಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ರಫೀಕ್ ಅಹಮದ್ ಇನ್ನೂ ಮೆಕ್ಕಾದಲ್ಲಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT