ಹಿರಿಯೂರು: ಕಸ ವಿಲೇವಾರಿಗೆ ಸಂಬಂಧಿಸಿದಂತೆ ಇಲ್ಲಿನ ನಗರಸಭೆ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಪದೇ ಪದೇ ಎಚ್ಚರಿಕೆ ನೀಡಿದ ನಂತರವೂ ಕಸವನ್ನು ಬೀದಿಗೆ ಹಾಕಿದವರಿಗೆ ದಂಡದ ಜೊತೆ ಅವರಿಂದಲೇ ಕಸವನ್ನು ತುಂಬಿಸುವ ಕೆಲಸವನ್ನು ಮಂಗಳವಾರ ಬೇಕರಿಯೊಂದರ ಸಿಬ್ಬಂದಿಯಿಂದ ಮಾಡಿಸಿ ಬಿಸಿ ಮುಟ್ಟಿಸಿದೆ.

ನಗರದ ಹುಳಿಯಾರು ರಸ್ತೆಯಲ್ಲಿರುವ ನಂದಿನಿ ಬೇಕರಿಯವರಿಗೆ ಕಸವನ್ನು ರಸ್ತೆಬದಿಗೆ ಸುರಿಯದಂತೆ ಮೂರ್ನಾಲ್ಕು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೂ ಮಂಗಳವಾರ ಕಸದ ಗಾಡಿಗೆ ಕಾಯದೆ ಬೀದಿಗೆ ಬಿಸಾಡಿದ್ದನ್ನು ಗಮನಿಸಿದ ನಗರಸಭೆ ಆರೋಗ್ಯ ನಿರೀಕ್ಷಕರಾದ ಸಂಧ್ಯಾ, ಅಶೋಕ್ ಕುಮಾರ್, ನಯಾಜ್ ಷರೀಫ್ ನಗರಸಭೆ ಸಿಬ್ಬಂದಿ ಮೂಲಕ ಅದೇ ಕಸವನ್ನು ಬೇಕರಿ ಮುಂದೆ ಸುರಿಸಿದರು. ನಂತರ ಬೇಕರಿ ಸಿಬ್ಬಂದಿಯವರ ಕೈಯಲ್ಲಿಯೇ ಕಸ ತುಂಬಿಸಿ ವಾಹನಕ್ಕೆ ಕೊಡಿಸಿದರು. ಅಲ್ಲದೇ ಮತ್ತೊಮ್ಮೆ ಎಚ್ಚರಿಕೆ ನೀಡಿ, ₹ 2 ಸಾವಿರ ದಂಡ ವಿಧಿಸಿದ್ದಾರೆ.

ನಗರಸಭೆ ಕಾರ್ಯ ವೈಖರಿ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ನಗರದ ಬಹುತೇಕ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು, ವರ್ತಕರು ಅಥವಾ ಮನೆಗಳವರು ಕಸವನ್ನು ರಸ್ತೆಗೆ ಸುರಿಯುವುದು ಕಂಡು ಬಂದಲ್ಲಿ ಅಂಥವರಿಗೆ ದಂಡ ವಿಧಿಸುವ ಜೊತೆಗೆ ಇನ್ನೆಂದೂ ಕಸವನ್ನು ಬೀದಿಗೆ ಸುರಿಯದಂತೆ ಎಚ್ಚರಿಸಲು ಅವರ ಅಂಗಡಿ ಅಥವಾ ಮನೆಯ ಮುಂದೆ ಕಸವನ್ನು ರಾಶಿ ಹಾಕಿ ತುಂಬಿಸಲಾಗುವುದು ಎಂದು ನಗರಸಭೆಯವರು ಎಚ್ಚರಿಕೆ ನೀಡಿದ್ದಾರೆ.

‘ನಗರದ ನಾಗರಿಕರು ಇದಕ್ಕೆ ಅವಕಾಶ ಕೊಡದೆ ಕಸವನ್ನು ವಿಂಗಡಿಸಿ ಕಸದ ವಾಹನ ಬಂದಾಗ ನೀಡಬೇಕು. ಜೊತೆಗೆ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ಸ್ಥಗಿತಗೊಳಿಸಬೇಕು’ ಎಂದು ನಗರಸಭೆ ಪೌರಾಯುಕ್ತ ಎ. ವಸೀಂ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.