ಶುಕ್ರವಾರ, ಜೂನ್ 18, 2021
27 °C
ಮೊಳಕಾಲ್ಮುರು ತಾಲ್ಲೂಕಿನ ಗುಡ್ಡದಹಳ್ಳಿ

ಅಜೀರ್ಣದಿಂದ ಕರಡಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ತಾಲ್ಲೂಕಿನ ಗುಡ್ಡದಹಳ್ಳಿ ಬಳಿ ಶನಿವಾರ ಅಸ್ವಸ್ಥ ಸ್ಥಿತಿಯಲ್ಲಿ ಸಿಕ್ಕಿದ್ದ ಕರಡಿಯೊಂದು ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ಮೃತಪಟ್ಟಿದೆ.

ಬಾಯಲ್ಲಿ ಹಲ್ಲುಗಳು ಇಲ್ಲದ ವಯಸ್ಸಾದ ಕರಡಿಯೊಂದು ಸಪೋಟ ಹಣ್ಣುಗಳನ್ನು ಹೆಚ್ಚಾಗಿ ತಿಂದು ಅಸ್ವಸ್ಥ ಸ್ಥಿತಿಯಲ್ಲಿ ಗುಡ್ಡದಹಳ್ಳಿ ಬಳಿ ಬಿದ್ದಿತ್ತು. ಗ್ರಾಮಸ್ಥರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಚಿಕಿತ್ಸೆಗಾಗಿ ಪಟ್ಟಣದ ಸಸ್ಯಕ್ಷೇತ್ರಕ್ಕೆ ಕರೆ
ತಂದಿದ್ದರು.

ಕರಡಿಯ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸಸ್ಯಕ್ಷೇತ್ರ ಆವರಣದಲ್ಲಿ ಶವವನ್ನು ಸುಡಲಾಯಿತು. ಅರಣ್ಯಾಧಿಕಾರಿ ಹಸನ್ ಬಾಷಾ, ಪಶು ತಾಲ್ಲೂಕು ಅಧಿಕಾರಿ ಡಾ.ತಿಮ್ಮಣ್ಣ ಮತ್ತು ಸಿಬ್ಬಂದಿ ಇದ್ದರು.

3ನೇ ಘಟನೆ: ಇದೂ ಸೇರಿ ಕಳೆದ ಒಂದು ತಿಂಗಳಲ್ಲಿ ತಾಲ್ಲೂಕಿನಲ್ಲಿ ಮೂರು ಕರಡಿಗಳು ಮೃತಪಟ್ಟಿವೆ. ರೊಪ್ಪ ಬಳಿ ಒಂದು ಕರಡಿ ಶವವಾಗಿ ಪತ್ತೆಯಾಗಿತ್ತು. ಮತ್ತೊಂದು ಕರಡಿ ದೇವಸಮುದ್ರ ಕ್ರಾಸ್ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿತ್ತು. ಆಹಾರ, ನೀರು ಅರಸಿ ಕರಡಿಗಳು ಬರುತ್ತಿರುವ ಕಾರಣ ಘಟನೆಗಳು ನಡೆಯುತ್ತಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು