ಹೊಳಲ್ಕೆರೆ: ಗೃಹಲಕ್ಷ್ಮಿ ಯೋಜನೆಯನ್ನು ಹೆಚ್ಚು ಮಹಿಳೆಯರಿಗೆ ತಲುಪಿಸುವ ಉದ್ದೇಶದಿಂದ ಪಟ್ಟಣದ ಪುರಸಭೆ ವತಿಯಿಂದ ಸಂಚಾರ ನೋಂದಣಿ ಕೇಂದ್ರ ಆರಂಭಿಸಲಾಗಿದೆ ಎಂದು ಮುಖ್ಯಾಧಿಕಾರಿ ಎ.ವಾಸಿಂ ತಿಳಿಸಿದರು.
ಪಟ್ಟಣದ ಎಂ.ಎಂ. ಸರ್ಕಾರಿ ಪ್ರೌಢಶಾಲೆಗೆ ಒದಗಿಸಿರುವ ಸರ್ಕಾರಿ ಬಸ್‌ನಲ್ಲಿ ಗೃಹಲಕ್ಷ್ಮಿ ನೋಂದಣಿ ಕೇಂದ್ರ ಆರಂಭಿಸಿದ್ದು, ಫಲಾನುಭವಿಗಳ ಮನೆಗಳ ಮುಂದೆಯೇ ಬಸ್ ನಿಲ್ಲಿಸಿ ನೋಂದಣಿ ಮಾಡಿಸಲಾಗುವುದು. ಈಗಾಗಲೇ ಬಾಪೂಜಿ ಸೇವಾಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ನಗರ ಪುರಸಭೆಯಿಂದ ಆರಂಭಿಸಿರುವ ಕೇಂದ್ರಗಳಲ್ಲಿ ನೋಂದಣಿ ಮಾಡಲಾಗುತ್ತಿದೆ. ಇದರೊಂದಿಗೆ ರೈತರು, ಕಾರ್ಮಿಕರು, ಬಡವರ ನೋಂದಣಿಗೆ ಅನುಕೂಲ ಆಗಲಿ ಎಂದು ಸಂಚಾರ ನೋಂದಣಿ ಕೇಂದ್ರ ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.
ಪುರಸಭೆ ಸಿಬ್ಬಂದಿ ಡಿ.ನೌಷಾದ್, ಮಹೇಶ್, ಮಹಮ್ಮದ್ ಶೌಕತ್, ನಾಗಭೂಷಣ್, ಪ್ರಶಾಂತ್, ದೇವರಾಜ್, ಕಿಶೋರ್, ವಿಜಯ್ ಹಾಗೂ ಪೌರಕಾರ್ಮಿಕರು ಇದ್ದರು.