ಹೊಸದುರ್ಗ: ತಾಲ್ಲೂಕಿನ ಚನ್ನಸಮುದ್ರ (ಪುರ) ಗ್ರಾಮದಲ್ಲಿ ನೆಲೆಸಿರುವ ಲಕ್ಷ್ಮೀರಂಗನಾಥಸ್ವಾಮಿ ದೇಗುಲದ ಪ್ರಾರ್ಥನಾ ಮಂದಿರ ನಿರ್ಮಾಣಕ್ಕಾಗಿ ಶಾಸಕ ಬಿ.ಜಿ ಗೋವಿಂದಪ್ಪ ₹ 25 ಲಕ್ಷ ಅನುದಾನ ಬಿಡುಗಡೆಗೊಳಿಸಿದರು.

ಲಕ್ಷ್ಮೀರಂಗನಾಥಸ್ವಾಮಿದೇಗುಲದ ಭೂಮಿ ಪೂಜೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಯನ್ನು ಉದ್ಘಾಟನೆ ಮಾಡಿದರು.

ಚನ್ನಸಮುದ್ರ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದು, ಎರಡು ಹೈಮಾಸ್ಕ್ ವಿದ್ಯುತ್ ದೀಪ ಸ್ಥಾಪನೆ, ₹ 20 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ, ₹ 15 ಲಕ್ಷ ವೆಚ್ಚದಲ್ಲಿ ನೂತನ ಶಾಲಾ ಕೊಠಡಿ ನಿರ್ಮಾಣ ಮಾಡಲಾಗಿದೆ ಎಂದರು.

ಬೋಕಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಸತಿ ರಹಿತರಿಗೆ ನಿವೇಶನವನ್ನು ನೀಡಲು ಗ್ರಾಮಸಭೆ ನಡೆಸಿ ನೀಡಲಾಗುವುದು ಎಂದು ಹೇಳಿದರು.

ಬೋಕಿಕೆರೆ ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಜಯಣ್ಣ, ಬಿಇಒ ಸೈಯದ್ ಮೋಸಿನ್, ಟಿಎಪಿಸಿಎಂಎಸ್ ಅಧ್ಯಕ್ಷ ಕಾರೇಹಳ್ಳಿ ಬಸವರಾಜ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್, ತಾ. ಪಂ. ಕೆಡಿಪಿ ಸದಸ್ಯೆ ದೀಪಿಕಾ, ಇಒ ಸುನೀಲ್ ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಾಂತಪ್ಪ, ಗುತ್ತಿಗೆದಾರ ರಂಗನಾಥ್, ಗುಡಿ ಗೌಡರಾದ ಅಂಗಡಿ ಚಂದ್ರಪ್ಪ, ರಂಗನಾಥ್, ಗವಿರಂಗನಾಥ್, ಚಂದ್ರಪ್ಪ, ರಂಗಪ್ಪ, ರಾಜಪ್ಪ, ರಂಗಸ್ವಾಮಿ, ರಂಗನಾಥ್ ಮುಖಂಡರಾದ ಹರೀಶ್ ಬಾಬು, ಲಕ್ಷಣ್, ನಿರ್ಮಿತಿ ಇಂಜಿನಿಯರ್, ಶಾಲಾ ಸಿಬ್ಬಂದಿ, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಗ್ರಾಮಸ್ಥರು ಹಾಗೂ ಭಕ್ತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.