ನಮ್ಮ ಸಿಬ್ಬಂದಿ ನಿಯಮಿತವಾಗಿ ಪೈಪ್‌ಲೈನ್ ಪರಿಶೀಲಿಸುತ್ತಾರೆ. ಆದರೂ ಕೆಲವು ವೇಳೆ ಕಣ್ತಪ್ಪಿ ಹೋಗುತ್ತದೆ. ಕ್ಯಾದಿಗೆರೆ ಬಳಿ ಪೈಪ್ ಒಡೆದಿದ್ದರೆ ತಕ್ಷಣವೇ ಸರಿಪಡಿಸುವಂತೆ ತಿಳಿಸುತ್ತೇನೆ
ಎಸ್.ಲಕ್ಷ್ಮಿ ಆಯುಕ್ತೆ ನಗರಸಭೆ
ರೈತರೇ ಪೈಪ್ ಒಡೆಯುವರೇ?
‘ವಿ.ವಿ. ಸಾಗರದಿಂದ ನೀರು ಬರುವ ಮಾರ್ಗದಲ್ಲಿ ಕೃಷಿ ಜಮೀನುಗಳಿವೆ. ಹೊಲದಲ್ಲಿರುವ ಬೆಳೆಗಳಿಗೆ ನೀರು ಕೊರತೆಯಾದಾಗ ರೈತರು ಪೈಪ್‌ಗೆ ಹಾರೆ ಹಾಕಿ ಒಡೆಯುತ್ತಾರೆ. ಇದು ಅಧಿಕಾರಿಗಳಿಗೂ ಗೊತ್ತಿದೆ. ಹಲವು ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಕೃತ್ಯ ನಿಲ್ಲಿಸಿಲ್ಲ. ಪೈಪ್‌ಲೈನ್ ಮಾರ್ಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕಿದೆ’ ಎಂದು ನಗರಸಭಯ ಮಾಜಿ ಸದಸ್ಯರೊಬ್ಬರು ತಿಳಿಸಿದರು.