ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ನೀರಿನ ಸರಬರಾಜಿನಲ್ಲಿ ಲೋಪ ಎಸಗಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ
– ಟಿ.ವೆಂಕಟೇಶ್, ಜಿಲ್ಲಾಧಿಕಾರಿ
ನೀರಿನ ಸಮಸ್ಯೆ ಎದುರಿಸಬಹುದಾದ ಗ್ರಾಮಗಳನ್ನು ಗುರುತಿಸಿ ಜನಸಂಖ್ಯೆ ಮತ್ತು ಲಭ್ಯವಿರುವ ಬೋರ್‌ವೆಲ್‌ಗಳ ಸ್ಥಿತಿಗತಿ ಬಗ್ಗೆ ವರದಿ ನೀಡಲು ಸೂಚಿಸಲಾಗಿದೆ. ಜತೆಗೆ ಜಂಟಿ ಸಮೀಕ್ಷೆಗೆ ನಿರ್ದೇಶನ ನೀಡಲಾಗಿದೆ.
ಡಾ.ಎಸ್.ಆಕಾಶ್, ಸಿಇಒ, ಜಿಲ್ಲಾ ಪಂಚಾಯಿತಿ
ಜೆಜೆಎಂನಡಿ ಅಳವಡಿಸಿರುವ ನಲ್ಲಿಗಳಲ್ಲಿ ನೀರು ಹರಿಯುವುದು ದೂರದ ಮಾತು. ಆ ನೀರನ್ನು ಕುಡಿಯಲೂ ಆಗುವುದಿಲ್ಲ. ಗ್ರಾಮದ ಆರ್‌ಒ ಘಟಕ ದುರಸ್ತಿಗೊಳಿಸಿದರೆ ಸಮಸ್ಯೆ ಬಗೆಹರಿಯುತ್ತದೆ.
– ಸಿ.ಕೇಶವಮೂರ್ತಿ, ಗ್ರಾಮಸ್ಥ, ಕಸವನಹಳ್ಳಿ
ನಿತ್ಯ ಕೂಲಿ ಬಿಟ್ಟು ನೀರಿಗೆ ಕಾಯುವುದೇ ಕೆಲಸವಾಗಿದೆ. ಕುಡಿಯುವ ನೀರಿಗೂ ಪಕ್ಕದ ಊರಿಗೆ ಹೋಗಬೇಕು. ಎರಡು ವರ್ಷದಿಂದ ಇದೇ ಗೋಳಾಗಿದೆ. ಮನೆಯಲ್ಲಿ ಒಬ್ಬರು ನೀರು ತರುವ ಕೆಲಸ ಮಾಡುವಂತಾಗಿದೆ.
– ತಿಮ್ಮಕ್ಕ, ಗ್ರಾಮಸ್ಥೆ ಕಸವನಹಳ್ಳಿ
ಹೊಸದುರ್ಗ ತಾಲ್ಲೂಕಿನಾದ್ಯಂತ 40 ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಗೆ ಬಂದಿವೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರು ಅವುಗಳನ್ನು ದುರಸ್ತಿ ಮಾಡಿ ಪಂಚಾಯಿತಿಗೆ ನೀಡಿದರೆ ಅನುಕೂಲವಾಗುತ್ತದೆ.
– ಸುನೀಲ್ ಕುಮಾರ್, ಇಒ, ತಾಲ್ಲೂಕು ಪಂಚಾಯಿತಿ
ಪೂರಕ ಮಾಹಿತಿ: ಎಚ್.ಡಿ.ಸಂತೋಷ್, ವಿ.ಧನಂಜಯ
ಕಸವನಹಳ್ಳಿಯಲ್ಲಿನ ಜೆಜೆಎಂ ನಲ್ಲಿಗಳ ಸ್ಥಿತಿ
ಸಂಪೂರ್ಣ ಹಾಳಾಗಿರುವ ಹೊಸದುರ್ಗ ತಾಲ್ಲೂಕಿನ ಮಳಲಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ