ಚಿತ್ರದುರ್ಗ: ‘ದೇಶದ ಅಭಿವೃದ್ಧಿಗೆ ಪೂರಕ’, ‘ಮತದಾನ ಪ್ರಮಾಣ ಹೆಚ್ಚಿಸುವ ಮಂತ್ರ’, ‘ಆಡಳಿತದಲ್ಲಿ ಸ್ಥಿರತೆ ತರಲು ಸಹಕಾರಿ’, ‘ಏಕಕಾಲಕ್ಕೆ ಚುನಾವಣೆ ಮತದಾನ ವೆಚ್ಚ, ಪ್ರಚಾರದ ಖರ್ಚು ತಗ್ಗಿಸಲು ಸಹಕಾರಿ’..

ಇವು ನಗರದ ಡಾನ್ ಬೋಸ್ಕೋ ಪದವಿ ಕಾಲೇಜು ಸಭಾಂಗಣದಲ್ಲಿ ಭಾನುವಾರ ಯುವ ಕಾರ್ಯಕ್ರಮ ಮತ್ತು ಕ್ರೀಡಾ ಸಚಿವಾಲಯ, ದಾವಣಗೆರೆ ವಿಶ್ವವಿದ್ಯಾಲಯ, ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಆರಂಭವಾದ ಎರಡು ದಿನಗಳ ‘ವಿಕಸಿತ ಭಾರತ ಯುವ ಸಂಸತ್’ ಸ್ಪರ್ಧೆಯಲ್ಲಿ ‘ಒಂದು ದೇಶ ಒಂದು ಚುನಾವಣೆ’ ಸಾಧಕ–ಬಾಧಕ ಕುರಿತು ಮೊದಲ ದಿನ ವ್ಯಕ್ತವಾದ ಅಭಿಪ್ರಾಯಗಳು.

ಚಿತ್ರದುರ್ಗ, ದಾವಣಗೆರೆಯಿಂದ ಒಟ್ಟು 153 ಯುವಜನರು ಸ್ಪರ್ಧೆಗೆ ಆಯ್ಕೆಯಾಗಿದ್ದು, ಮೊದಲ ದಿನ 55 ಯುವಜನರು ತಲಾ 3 ನಿಮಿಷಗಳ ಮಿತಿಯಲ್ಲಿ ತಮ್ಮ ವಿಚಾರ ಮಂಡಿಸಿದರು. ಬಹುತೇಕ ಯುವಜನರು ‘ಒಂದು ದೇಶ ಒಂದು ಚುನಾವಣೆ’ಯಿಂದ ಆಗಬಹುದಾದ ಆರ್ಥಿಕ ಲಾಭ, ಆಡಳಿತ ಯಂತ್ರದ ಸುಧಾರಣೆ, ರಾಜಕೀಯ ಪಕ್ಷಗಳ ಹುಸಿ ಭರವಸೆಗಳಿಗೆ ಕಡಿವಾಣ ಬೀಳಬಲ್ಲವು ಎಂಬ ಅಭಿಪ್ರಾಯಗಳನ್ನು ಹೆಚ್ಚಾಗಿ ವ್ಯಕ್ತಪಡಿಸಿದ್ದು ಕಂಡು ಬಂತು.

‘ಉದ್ಯೋಗಕ್ಕಾಗಿ ವಲಸೆ, ಗುಳೆ ಹೋಗುವ ಜನರು ಸ್ವಗ್ರಾಮಗಳಿಗೆ ಬಂದು ಮತದಾನದಲ್ಲಿ ಪಾಲ್ಗೊಳ್ಳಲು ನೆರವಾಗುತ್ತದೆ’, ‘ಚುನಾವಣೆ ಪ್ರಜಾಪ್ರಭುತ್ವದ ಹಬ್ಬವೇನೋ ನಿಜ. ಹಾಗಂತ ವರ್ಷವಿಡೀ ಹಬ್ಬ ಆಚರಣೆ ಸರಿಯೇ? ಪದೇ ಪದೇ ಚುನಾವಣೆ ನಡೆಸುವ ಬದಲು ಒಮ್ಮೆಲೇ ಚುನಾವಣೆ ನಡೆಸುವುದು ಸೂಕ್ತ’,‘ಒಮ್ಮೆಲೇ ಚುನಾವಣೆ ನಡೆಸುವುದರಿಂದ ಚುನಾವಣಾ ವೆಚ್ಚ, ಪ್ರಚಾರ ವೆಚ್ಚ ತಗ್ಗಿಸಬಹುದು. ರಾಜಕೀಯ ಪಕ್ಷಗಳು ಚುನಾವಣೆ ಮೇಲೆ ಕೇಂದ್ರೀಕರಿಸುವ ಸಮಯವನ್ನು ಅಭಿವೃದ್ಧಿಪರ ಚಿಂತನೆಗೆ ವಿನಿಯೋಗಿಸಬಹುದು’ ಎಂದು ಯುವಜನರು ತಮ್ಮ ಅಭಿಪ್ರಾಯ ಮಂಡಿಸಿದರು.

‘ಪದೇಪದೆ ಜಾರಿಯಾಗುವ ಮಾದರಿ ನೀತಿ ಸಂಹಿತೆ ಅಭಿವೃದ್ಧಿಗೆ ದೊಡ್ಡ ಅಡ್ಡಿ. ಚುನಾವಣೆ ನಡೆದಾಗೊಮ್ಮೆ 2–3 ತಿಂಗಳು ಆಡಳಿತ ಯಂತ್ರವೇ ಸ್ಥಗಿತಗೊಳ್ಳುತ್ತದೆ. ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತವು ಚುನಾವಣೆಗೆ ಹೆಚ್ಚು ವೆಚ್ಚ ಮಾಡದೇ, ಪ್ರಗತಿಗೆ ದುಡ್ಡು ವಿನಿಯೋಗಿಸಬೇಕು’ ಎಂದು ಪ್ರತಿಪಾದಿಸಿದರು.

‘ಒಕ್ಕೂಟ ವ್ಯವಸ್ಥೆಯುಳ್ಳ ದೇಶದಲ್ಲಿ ರಾಜ್ಯಗಳ ಆದ್ಯತೆ ನಿರ್ಲಕ್ಷಿಸುತ್ತದೆ. ಸಾಂವಿಧಾನಿಕ ತಿದ್ದುಪಡಿಗಳನ್ನು ಬೇಡುತ್ತದೆ. ಪ್ರಾದೇಶಿಕ ಪಕ್ಷಗಳ ಅಸ್ತಿತ್ವ ಗೌಣವಾಗುತ್ತದೆ. ರಾಷ್ಟ್ರೀಯ ಸಮಸ್ಯೆಗಳ ಎದುರು ರಾಜ್ಯದ ಸಮಸ್ಯೆಗಳಿಗೆ ಸ್ಪಂದನೆಯೇ ಸಿಗಲ್ಲ. ಏಕಕಾಲಕ್ಕೆ ಚುನಾವಣೆ ನಡೆಸಿದರೆ, ಇವಿಎಂಗಳ ಕೊರತೆ, ಭದ್ರತಾ ಏರ್ಪಾಡು, ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರುತ್ತದೆ. ಯಾವ ವಿಷಯಕ್ಕಾಗಿ ಮತಹಾಕಬೇಕು ಎಂಬುದರ ಬಗೆಗೆ ಮತದಾರರೂ ಗೊಂದಲಕ್ಕೆ ಸಿಲುಕುತ್ತಾರೆ’ ಎಂದು ಬೆಳಕು ಚೆಲ್ಲಿದರು.

ಡಾನ್ ಬೋಸ್ಕೋ ಪದವಿ ಕಾಲೇಜು ಪ್ರಾಂಶುಪಾಲ ಫಾ.ಬೆನ್ನಿ ಕ್ರಿಸ್ತುದಾಸ್ ಚಾಲನೆ ನೀಡಿದರು. ನೆಹರು ಯುವ ಕೇಂದ್ರದ ಯುವಜನ ಸಮನ್ವಯಾಧಿಕಾರಿ ಎನ್.ಸುಹಾಸ್, ಎನ್ಎಸ್ಎಸ್ ನೋಡಲ್ ಅಧಿಕಾರಿಗಳಾದ ಎನ್.ಧನಕೋಟಿ, ಎಚ್.ಆರ್.ತಿಪ್ಪೇಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.