ಚಿತ್ರದುರ್ಗ: ತಾಲ್ಲೂಕಿನ ಬೊಮ್ಮಕ್ಕನಹಳ್ಳಿಯಲ್ಲಿ ನಡೆದಿದ್ದ ಹನುಮಂತಪ್ಪ– ತಿಪ್ಪಮ್ಮ ದಂಪತಿ ಕೊಲೆ ಪ್ರಕರಣವನ್ನು ಪೊಲೀಸದು ಭೇದಿಸಿದ್ದು ಪ್ರಮುಖ ಆರೋಪಿ, ಕೊಲೆಯಾದ ದಂಪತಿಯ ಅಳಿಯ ಮಂಜುನಾಥ್ನನ್ನು ಬಂಧಿಸಿದ್ದಾರೆ.

ಸೆ. 19ರಂದು ಹನುಮಂತಪ್ಪ– ತಿಪ್ಪಮ್ಮ ಅವರ ಕೊಲೆಯಾಗಿತ್ತು. ಈ ಸಂಬಂಧ ಮೃತರ ಪುತ್ರಿ ಹರ್ಷಿತಾ, ತನ್ನ ಪತಿ ಮಂಜುನಾಥ ಮತ್ತು ಆತನ ಸಂಬಂಧಿಕರ ವಿರುದ್ಧ ತುರುವನೂರು ಠಾಣೆಗೆ ದೂರು ನೀಡಿದ್ದರು. ಕೊಲೆ ನಡೆದ ದಿನವೇ ಆರೋಪಿತರ ಪೈಕಿ ರಘು, ಚಂದ್ರಪ್ಪ ಹಾಗೂ ಮಲ್ಲಿಕಾರ್ಜುನ್ ಅವರನ್ನು ಬಂಧಿಸಿದ್ದರು. ಆದರೆ ಪ್ರಮುಖ ಆರೋಪಿ, ಅಳಿಯ ಮಂಜುನಾಥ್ ತಲೆ ಮರೆಸಿಕೊಂಡಿದ್ದ. ಆತನ ಪತ್ತೆಗೆ ಗ್ರಾಮಾಂತರ ಠಾಣೆ ಪೊಲೀಸರ ತಂಡ ರಚಿಸಲಾಗಿತ್ತು.

ಟೆಲಿಕಾಂ ಕಂಪನಿಯಲ್ಲಿ ಕೆಲಸ ಮಾಡಿದ ಅನುಭವವಿದ್ದ ಮಂಜುನಾಥ್ ಮೊಬೈಲ್ ಬಳಸದೇ ಪೊಲೀಸರೊಂದಿಗೆ ಕಣ್ಣಾಮುಚ್ಚಾಲೆ ಆಡಿಸುತ್ತಿದ್ದ. ಈತನ ಗೆಳೆಯರ ಫೋನ್ ಕರೆಗಳ ರೆಕಾರ್ಡಿಂಗ್, ವಾಟ್ಸ್ ಆ್ಯಪ್ ಕರೆಗಳ ಜಾಡು ಹಿಡಿದು ಆರೋಪಿಯನ್ನು ತೆಲಂಗಾಣದ ವಿಜಯವಾಡ ಜಿಲ್ಲೆ ಭದ್ರಾದ್ರಿಕೊತ್ತಗೊಡೆಂನಲ್ಲಿ ಬಂಧಿಸಿದ್ದಾರೆ.

‘ವಿಜಯವಾಡ ಪೊಲೀಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ತನಿಖಾ ತಂಡಗಳಿಗೆ ನಗದು ಬಹುಮಾನ ನೀಡಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.