ಉತ್ತಮ ಆಡಳಿತ ಯಂತ್ರಕ್ಕೆ ಅತ್ಯತ್ತಮ ನಾಯಕನ ಅವಶ್ಯಕತೆ ಇದೆ. ಆಡಳಿತ ಪಕ್ಷಗಳು ಪಾರದರ್ಶಕವಾಗಿ, ದೋಷಮುಕ್ತವಾಗಿ ಕೆಲಸ ಮಾಡಬೇಕು. ಜೊತೆಗೆ ವಿರೋಧ ಪಕ್ಷಗಳು ಆಡಳಿತ ಪಕ್ಷದ ಲೋಪದೋಷಗಳನ್ನು ಎತ್ತಿ ಹಿಡಿಯುವುದು ಸಹಜ ಪ್ರಕ್ರಿಯೆ ಆಗಿದೆ. ಅಪರೂಪದ ರಾಜಕಾರಣಿಯಾಗಿರುವ ಸಿದ್ದರಾಮಯ್ಯ ಅವರು ತಮ್ಮ ಸಿಂಹಾವಲೋಕನ ಬದುಕಿನಲ್ಲಿ ಆದರ್ಶ, ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿದ್ದಾರೆ. ನಡೆ ನುಡಿಯನ್ನು ಒಂದಾಗಿಸಿಕೊಂಡು ಆಡಳಿತ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.