ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿಕೆ ಹಾದಿಯಲ್ಲಿಡೆಂಗಿ –ಚಿಕೂನ್‌ಗುನ್ಯಾ

ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಾರ್ವಜನಿಕರ ಸಹಭಾಗಿತ್ವ ಅಗತ್ಯ
Last Updated 3 ಜುಲೈ 2021, 3:23 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕಿನ ಆತಂಕದ ನಡುವೆ 2020ರಲ್ಲಿ ಏರಿಕೆ ಕಂಡಿದ್ದ ಡೆಂಗಿ ಪ್ರಕರಣಗಳ ಸಂಖ್ಯೆ
ಈ ವರ್ಷ ಇಳಿಕೆ ಕಂಡಿದೆ. ಚಿಕೂನ್‌ಗುನ್ಯಾ ಕೂಡ ಇದಕ್ಕೆ ಹೊರತಾಗಿಲ್ಲ. ಜೊತೆಗೆ ಮಲೇರಿಯಾ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ನಿಯಂತ್ರಣಕ್ಕೆ ಬರುತ್ತಿವೆ.

ಜಿಲ್ಲೆಯಾದ್ಯಂತ ಡೆಂಗಿ ಮತ್ತು ಚಿಕೂನ್‌ ಗುನ್ಯಾ ಸಂಬಂಧ ನಡೆಯುವ ಸರ್ವೆ ಅವಧಿಯಲ್ಲಿ ಚಿತ್ರದುರ್ಗ ನಗರದಲ್ಲೇ ಹಿಂದಿಗಿಂತಲೂ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದ್ದವು. ಸತತ ಎಂಟು–ಹತ್ತು ವರ್ಷಗಳಿಂದ ಚಿತ್ರದುರ್ಗ ಪ್ರಥಮ ಸ್ಥಾನ ಪಡೆದಿತ್ತು. ಈಗ ಜಿಲ್ಲೆಯ ಉಳಿದೆಲ್ಲ ತಾಲ್ಲೂಕುಗಳಂತೆ ಇಲ್ಲಿಯೂ ರೋಗಿಗಳ ಸಂಖ್ಯೆ ಇಳಿಕೆ ಆಗುತ್ತಿದೆ.

ಕೀಟಗಳಿಂದ ಹರಡುವಂಥ ಸಾಂಕ್ರಾಮಿಕ ರೋಗಗಳು ಸಾಮಾನ್ಯವಾಗಿ ಮುಂಗಾರು ಮಳೆ ಸಂದರ್ಭದಲ್ಲಿ ಹೆಚ್ಚು. 2017ರಲ್ಲಿ ಇವೆರಡು ರೋಗಗಳ ಸಂಖ್ಯೆ ಜಿಲ್ಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿತ್ತು. ಡೆಂಗಿ 500ರ ಗಡಿ ದಾಟಿದ್ದರೆ, ಚಿಕೂನ್‌ ಗುನ್ಯಾ
600 ಗಡಿ ದಾಟಿತ್ತು. ಆ ಅವಧಿ
ಯಲ್ಲಿ ಸಾವು–ನೋವು ಕೂಡ ಸಂಭವಿಸಿತ್ತು.

ಡೆಂಗಿ ಹಾಗೂ ಚಿಕೂನ್‌ಗುನ್ಯಾ ಪ್ರಕರಣಗಳು 2018ರಲ್ಲಿ ಹತೋಟಿಗೆ ಬಂದಿದ್ದವು. ಆದರೆ, 2019ರಲ್ಲಿ ಪುನಃ ಊಹೆಗೂ ಮೀರಿ
ಹೆಚ್ಚಳವಾಗಿದ್ದವು. ಆ ಅವಧಿ
ಯಲ್ಲಿ ಮುಂಗಾರು ಅಷ್ಟೇ ಅಲ್ಲದೆ, ಹಿಂಗಾರು ಮಳೆ ವ್ಯಾಪಕವಾಗಿ ಸುರಿದಿದ್ದರಿಂದಲೂ ವಿವಿಧೆಡೆ
ನೀರು ಶೇಖರಣೆಯಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿತ್ತು. ಸದ್ಯ ಮಳೆಗಾಲ
ಆರಂಭವಾಗಿದ್ದರೂ ಹಿಂದಿನಂತೆ ಪ್ರಕರಣ ಏರಿಕೆ ಆಗದಿರುವುದು ಸ್ವಲ್ಪಮಟ್ಟಿಗೆ ನೆಮ್ಮದಿಗೆ ಕಾರಣವಾಗಿದೆ.

2017 ಮತ್ತು 19ರಲ್ಲಿ ಸಾಂಕ್ರಾಮಿಕ ರೋಗದಿಂದಾಗಿ ಹಲವರು ತತ್ತರಿಸಿದ್ದ ಪರಿಣಾಮ ರೋಗ ಹರಡುವಿಕೆ ನಿಯಂತ್ರಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಚಿಸಿರುವ ತಂಡಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಮಳೆಗಾಲದಲ್ಲಿ ಕೈಗೊಳ್ಳುತ್ತಿರುವ ಸತತ ಸರ್ವೆ
ಕಾರ್ಯ ಹಾಗೂ ವಿವಿಧ ಪ್ರದೇಶ
ಗಳಲ್ಲಿ ಜಾಗೃತಿ ಮೂಡಿಸಿದ್ದರಿಂದಾಗಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲು ಕಾರಣವಾಗಿದೆ. ಆದರೆ, ಹಿಂಗಾರು ಮಳೆ ಮುಗಿಯುವವರೆಗೂ ಎಚ್ಚರಿಕೆ
ಯಿಂದ ಇರಬೇಕಾದ
ಅಗತ್ಯವಿದೆ.

2025ರ ಒಳಗೆ ಮಲೇರಿಯಾ ಮುಕ್ತ ಜಿಲ್ಲೆಯ ಗುರಿ ಹೊಂದಿರುವ ಇಲಾಖೆಯು ಡೆಂಗಿ, ಚಿಕೂನ್‌ ಗುನ್ಯಾ ರೋಗಗಳ ನಿಯಂತ್ರಣಕ್ಕೂ ಪಣ ತೊಟ್ಟಿದೆ. ಅದಕ್ಕಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಲಾರ್ವಾ ಸರ್ವೆ ಕೂಡ ಮಾಡುತ್ತಲೇ ಇದ್ದಾರೆ. ಆದರೂ ಗ್ರಾಮೀಣ ಪ್ರದೇಶಗಳಿಗಿಂತಲೂ ನಗರ,
ಪಟ್ಟಣ ಪ್ರದೇಶಗಳ ಅಲ್ಲಲ್ಲಿ
ಈಗಲೂ ಕೆಲ ಪ್ರಕರಣಗಳು ಕಂಡು ಬರುತ್ತಿದೆ.

ಚಿತ್ರದುರ್ಗ ನಗರಕ್ಕೆ ಸಂಬಂಧಿಸಿ ಬುದ್ಧನಗರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ 14, ಮಾರುತಿ ನಗರ ಪಿಎಚ್‌ಸಿಯಿಂದ 11 ಹಾಗೂ
ನೆಹರೂ ನಗರ ಪಿಎಚ್‌ಸಿಯಿಂದ 12 ಸೇರಿ ಒಟ್ಟು 37 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ ಇಬ್ಬರನ್ನು ನಿಯೋಜಿಸಲಾಗಿದ್ದು, ನಗರ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ,
ಅರಿವು ಮೂಡಿಸಲಾಗುತ್ತಿದೆ. ಇದೇ ವೇಳೆ ಲಾರ್ವಾ ಕಂಡು ಬಂದಲ್ಲಿ
ಗಪ್ಪಿ, ಗಾಂಬೋಸಿಯಾ ಮೀನುಗಳನ್ನು ಬಿಡಲಾಗುತ್ತಿದೆ.

‘ಸಾಂಕ್ರಾಮಿಕ ರೋಗ ನಿಯಂತ್ರಿಸುವಲ್ಲಿ ನಾಗರಿಕರ ಪ್ರೋತ್ಸಾಹ ತುಂಬಾ ಅಗತ್ಯವಿದೆ. ಅವರು ಕೈಜೋಡಿಸಿದರೆ ಮಾತ್ರ ನಿರ್ಮೂಲನೆಗೆ ಸಹಕಾರಿ ಆಗಲಿದೆ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ
ಡಾ. ಕಾಶಿ ಮನವಿ ಮಾಡಿದ್ದಾರೆ.

ಪರೀಕ್ಷೆ ನಡೆಯುತ್ತಲೇ ಇದೆ

‘ಜ್ವರ, ಅಧಿಕ ತಲೆನೋವು, ಸುಸ್ತು ಇತರ ರೋಗಲಕ್ಷಣ ಕಾಣಿಸಿಕೊಂಡ ಅನೇಕರು ಕೋವಿಡ್ ಪರೀಕ್ಷೆಯ ಜತೆಗೆ ಡೆಂಗಿ ಮತ್ತು ಚಿಕೂನ್‌ಗುನ್ಯಾ ಪರೀಕ್ಷೆಗೂ ಒಳಗಾಗಿದ್ದಾರೆ. ಪ್ರಕರಣ ಗುರುತಿಸಲಿಕ್ಕಾಗಿ ಪರೀಕ್ಷೆ ನಿರಂತರವಾಗಿ ನಡೆಯುತ್ತಲೇ ಇದೆ’ ಎಂದು ಡಾ.ಕಾಶಿ ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ 2019ರಲ್ಲಿ ಎರಡು ಮೆದುಳು ಜ್ವರ ಪ್ರಕರಣ ಕಾಣಿಸಿಕೊಂಡಿತ್ತು. ಇದರಿಂದ ರೋಗಿಯೂ ವಿಪರೀತ ಜ್ವರದಿಂದ ನಲುಗಿ, ಪ್ರಜ್ಞಾಹೀನ ಸ್ಥಿತಿಗೆ ತಲುಪುವುದು ಸಾಮಾನ್ಯ. ಈ ಪ್ರಕರಣ ಹೊರತುಪಡಿಸಿ ಜಿಲ್ಲೆಯಲ್ಲಿ ಇಂತಹ ಪ್ರಕರಣ ಮರುಕಳಿಸಿಲ್ಲ. ಆದರೆ, ಅಕ್ಯುಬ್‌ ಎನ್‌ಸಫಲೈಟಿಸ್ ಸಿಂಡ್ರೋಮ್ (ಎಇಎಸ್) ಮಾದರಿಯ ಪ್ರಕರಣ ಆಗಾಗ ಕಾಣಿಸಿಕೊಳ್ಳುತ್ತವೆ. ರೋಗಲಕ್ಷಣ ಕಂಡು ಬಂದರೆ ನಿರ್ಲಕ್ಷ ಮಾಡದೇ ತಕ್ಷಣ ವೈದ್ಯರನ್ನು ಅಥವಾ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ’ ಎಂದು ಮನವಿ ಮಾಡಿದ್ದಾರೆ.

...

ಕೋವಿಡ್ ಜತೆಯಲ್ಲೇ ಜಿಲ್ಲೆಯ ಕೆಲವರಲ್ಲಿ ಡೆಂಗಿ ಕಾಣಿಸಿಕೊಂಡಿದೆ. ಆದರೆ, ಇವೆರಡು ರೋಗದಿಂದ ನೋವು ಅನುಭವಿಸಿದವರು ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಈವರೆಗೂ ಮೃತಪಟ್ಟ ಪ್ರಕರಣ ಇಲ್ಲ.
-ಡಾ.ಆರ್‌. ರಂಗನಾಥ್‌, ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT