ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿಯೇ ಭಕ್ತರ ಶ್ರೀಮಂತಿಕೆ: ಸಿರಿಗೆರೆಶ್ರೀ

ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ 30ನೇ ಶ್ರದ್ಧಾಂಜಲಿ ಕಾರ್ಯಕ್ರಮ
Last Updated 24 ಸೆಪ್ಟೆಂಬರ್ 2022, 4:45 IST
ಅಕ್ಷರ ಗಾತ್ರ

ಸಿರಿಗೆರೆ: ಮಠ ಮತ್ತು ಶ್ರೀಗಳ ಮೇಲಿರುವ ಭಕ್ತಿಯೇ ಭಕ್ತರ ಶ್ರೀಮಂತಿಕೆ. ಈ ದೇಶಕ್ಕೆ ಮಳೆ ಇಲ್ಲದೆ ಬರ ಬರಬಹುದು. ಆದರೆ ಭಕ್ತರ ಭಕ್ತಿಗೆ ಎಂದೂ ಬರವಿಲ್ಲ ಎಂದು ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಗುರುಶಾಂತೇಶ್ವರ ಭವನದ ಮುಂಭಾಗದಲ್ಲಿ ಶುಕ್ರವಾರ ನಡೆದ ತರಳಬಾಳು ಬೃಹನ್ಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 30ನೇ ಶ್ರದ್ಧಾಂಜಲಿ ಕಾರ್ಯಕ್ರಮದ ನಾಲ್ಕನೆಯ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಜಗತ್ತಿನ ಅನೇಕ ದೇಶಗಳಲ್ಲಿ ಏಕ ಧರ್ಮವಿದ್ದರೂ ಒಳ ಪಂಗಡಗಳ ಸಂಘರ್ಷಗಳಿಂದ
ಶಾಂತಿ ಕದಡುವಂತಾಗಿದೆ. ಭಾರತದಲ್ಲಿ ಭಯೋತ್ಪಾದನೆ ಭೀತಿ ಇದ್ದರೂ ಶಾಂತಿ ನೆಲೆಸಿದೆ. ಸಿರಿಗೆರೆ ಶ್ರೀಗಳು ಶಾಂತಿ ಸೌಹಾರ್ದಕ್ಕೆ ಮಾದರಿಯಾಗಿದ್ದಾರೆ ಎಂದು ಶಾಸಕಕೆ.ಎಸ್. ಈಶ್ವರಪ್ಪ ಹೇಳಿದರು.

ಸಿರಿಗೆರೆ ಶ್ರೀಗಳ ಶಿಕ್ಷಣ, ಅನ್ನದಾಸೋಹ, ಕೃಷಿ, ಕಲೆ ಮುಂತಾದ ರಂಗಗಳಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ದೇಶಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ ಎಂದುಶಾಸಕ ಎಂ.ಪಿ. ರೇಣುಕಾಚಾರ್ಯ ಪ್ರಶಂಸಿಸಿದರು.

ಸಿರಿಗೆರೆ ಮಠವು ಸಮಾಜಮುಖಿ ಕೆಲಸಗಳ ಮೂಲಕ ನಾಡಿನಲ್ಲಿಯೇ ವಿಶಿಷ್ಟವಾಗಿದೆ. ಕಾಯಕದ
ಮೂಲಕ ಮಠಾಧಿಪತಿಗಳು ಆದರ್ಶವಾಗಿರಬೇಕು ಎಂಬುದಕ್ಕೆ ಸಿರಿಗೆರೆಶ್ರೀ ಸಾಕ್ಷಿಯಾಗಿದ್ದಾರೆ ಎಂದುಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹೇಳಿದರು.

ಯವ ಬ್ರಿಗ್ರೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ‘ವಿಶ್ವಗುರು ಭಾರತ’ ವಿಷಯ ಕುರಿತು ಉಪನ್ಯಾಸ ನೀಡಿದರು.

ಶಾಸಕ ಪ್ರೊ. ಎನ್‌. ಲಿಂಗಣ್ಣ, ಮಾಜಿ ಶಾಸಕ ಎಚ್.ಪಿ. ರಾಜೇಶ್, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿದರು.

ಬೆಂಗಳೂರಿನ ಗಾನಗಂಗ ಸಂಗೀತ ವಿದ್ಯಾಲಯದ ಗೀತಾ ಬತ್ತದ್ ವಚನಗೀತೆ ಹಾಡಿದರು.

ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ 250 ವಿದ್ಯಾರ್ಥಿಗಳು ಜಾನಪದ ಸಿರಿ ಸಂಭ್ರಮ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT