ಮೈಸೂರು: ಹುಬ್ಬಳ್ಳಿ ಟೈಗರ್ಸ್ಗೆ ಸುಲಭದ ತುತ್ತಾದ ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ‘ಮಹಾರಾಜ ಟ್ರೋಫಿ’ ಪ್ಲೇಆಫ್ ರೇಸ್ನಿಂದ ಹೊರಬಿದ್ದಿತು.

ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟ್ವೆಂಟಿ20 ಟೂರ್ನಿಯ ಶನಿವಾರದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ 5 ವಿಕೆಟ್ ಅಂತರದಿಂದ ಮೈಸೂರನ್ನು ಮಣಿಸುವ ಮೂಲಕ ಪ್ಲೇಆಫ್ನಲ್ಲಿ ತನ್ನ ಸ್ಥಾನ ಭದ್ರ ಪಡಿಸಿಕೊಂಡಿತು.

130 ರನ್ಗಳ ಸಾಧಾರಣ ಗುರಿ ಬೆನ್ನು ಹತ್ತಿದ ಹುಬ್ಬಳ್ಳಿ ಪರ ನಾಯಕ ದೇವದತ್ತ ಪಡಿಕ್ಕಲ್ (44, 19ಎ, 4X5, 6X3 ) ಸಿಡಿದರೆ, ಕೆ.ಪಿ. ಕಾರ್ತಿಕೇಯ 52 ರನ್ಗಳ (32 ಎ, 4X6, 6X2) ಅಜೇಯ ಆಟದ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಪ್ರಸಿದ್ಧ ಕೃಷ್ಣ ಎಸೆದ ಮೊದಲ ಓವರ್ನಿಂದಲೇ ಅಬ್ಬರಿಸಿದ ಪಡಿಕ್ಕಲ್, ಮೊಹಮ್ಮದ್ ತಾಹಾ (7) ನಿರ್ಗಮನದ ಬಳಿಕ ಕಾರ್ತಿಕೇಯ ಜೊತೆಗೂಡಿ 35 ರನ್ಗಳ (15 ಎಸೆತ) ಉಪಯುಕ್ತ ಜೊತೆಯಾಟ ನೀಡಿದರು. ಅರ್ಧಶತಕದ ಹೊಸ್ತಿಲಲ್ಲಿ ಎಡವಿದ ಅವರು, ಕೆ. ಗೌತಮ್ ಎಸೆತದಲ್ಲಿ ವೆಂಕಟೇಶ್ಗೆ ಕ್ಯಾಚಿತ್ತರು. ಮರು ಎಸೆತದಲ್ಲೇ ಯಶ್ರಾಜ್ ಪೂಂಜರನ್ನು (0) ಪೆವಿಲಿಯನ್ಗೆ ಕಳುಹಿಸುವ ಮೂಲಕ ಗೌತಮ್ ವಾರಿಯರ್ಸ್ಗೆ ಗೆಲುವಿನ ಆಸೆ ಚಿಗುರಿಸಿದರಾದರೂ, ಕಾರ್ತಿಕೇಯ ಕ್ರೀಸ್ನಲ್ಲಿ ನೆಲೆ ನಿಂತರು. ತಾಳ್ಮೆಯಿಂದ ಆಡಿ, ಕೊನೆಯಲ್ಲಿ ಬೌಲರ್ಗಳನ್ನು ದಂಡಿಸಿ ಜಯದ ಕಾಣಿಕೆ ನೀಡಿದರು.

ಕಾರ್ತಿಕ್ ಆಸರೆ: ಮೊದಲು ಬ್ಯಾಟ್ ಮಾಡಿದ ಮೈಸೂರು ತಂಡಕ್ಕೆ ಸ್ಥಳೀಯ ಪ್ರತಿಭೆ ಎಸ್.ಯು. ಕಾರ್ತಿಕ್ ಅರ್ಧಶತಕದ ಮೂಲಕ ( 53 ರನ್, 36 ಎ, 4X2, 6X5) ಆಸರೆ ಆದರು.

ವಾರಿಯರ್ಸ್ಗೆ ಉತ್ತಮ ಆರಂಭ ದೊರೆಯಲಿಲ್ಲ. ಆರಂಭಿಕರಾಗಿ ಬಂದ ನಾಯಕ ಮನೀಷ್ ಪಾಂಡೆ (2) ನಿರಾಸೆ ಮೂಡಿಸಿದರು. ಕಡೆಯಲ್ಲಿ ಹರ್ಷಿಲ್ (20) ಹಾಗೂ ಶರತ್ ಶ್ರೀನಿವಾಸ್ (27) ತಂಡದ ಸ್ಕೋರ್ ಹೆಚ್ಚಿಸಲು ನೆರವಾದರು.

ಹುಬ್ಬಳ್ಳಿ ಪರ ಶ್ರೀಶ ಆಚಾರ್ 11 ರನ್ಗೆ 3 ವಿಕೆಟ್ ಮೂಲಕ ಎದುರಾಳಿಗಳ ಹೆಡೆಮುರಿ ಕಟ್ಟಿದರು. ಯಶ್ರಾಜ್ ಪೂಂಜ 19ಕ್ಕೆ 2 ವಿಕೆಟ್ ಪಡೆದರು.

ಹುಬ್ಬಳ್ಳಿ ಜೊತೆಗೆ ಮಂಗಳೂರು ಡ್ರ್ಯಾಗನ್ಸ್, ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಗುಲ್ಬರ್ಗ ಮಿಸ್ಟಿಕ್ಸ್ ಸಹ ಪ್ಲೇಆಫ್ನಲ್ಲಿ ಸ್ಥಾನ ಖಾತ್ರಿ ಪಡಿಸಿಕೊಂಡಿವೆ.. ಆ. 25ರಂದು ಲೀಗ್ ಹಂತದ ಕೊನೆಯ ಪಂದ್ಯಗಳು ನಡೆಯಲಿವೆ.

ಸಂಕ್ಷಿಪ್ತ ಸ್ಕೋರ್ ಮೈಸೂರು ವಾರಿಯರ್ಸ್: 20 ಓವರ್ಗಳಲ್ಲಿ 8 ವಿಕೆಟ್ಗೆ 129 ( ಎಸ್.ಯು. ಕಾರ್ತಿಕ್ 53, ಶರತ್ ಶ್ರೀನಿವಾಸ್ 27, ಹರ್ಷಿಲ್ 20, ಶ್ರೀಶ ಆಚಾರ್ 11ಕ್ಕೆ 3, ಯಶ್ರಾಜ್ ಪೂಂಜ 19ಕ್ಕೆ 2)
ಹುಬ್ಬಳ್ಳಿ ಟೈಗರ್ಸ್: 14.2 ಓವರ್ಗಳಲ್ಲಿ 5 ವಿಕೆಟ್ಗೆ 132 ( ಕೆ.ಪಿ. ಕಾರ್ತಿಕೇಯ ಔಟಾಗದೇ 52, ದೇವದತ್ತ ಪಡಿಕ್ಕಲ್ 44, ಅಭಿನವ್ ಮನೋಹರ್ 18, ಕೆ. ಗೌತಮ್ 21ಕ್ಕೆ 3 )
ಪಂದ್ಯದ ಆಟಗಾರ: ಕೆ.ಪಿ. ಕಾರ್ತಿಕೇಯ

ಇಂದಿನ ಪಂದ್ಯಗಳು ಬೆಂಗಳೂರು ಬ್ಲಾಸ್ಟರ್ಸ್ v/s ಮಂಗಳೂರು ಡ್ರ್ಯಾಗನ್ಸ್– ಮಧ್ಯಾಹ್ನ 3.15
ಶಿವಮೊಗ್ಗ ಲಯನ್ಸ್ v/s ಮೈಸೂರು ವಾರಿಯರ್ಸ್– ಸಂಜೆ 7.15

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.