ಮೊಳಕಾಲ್ಮುರು: ವಿದ್ಯುತ್ ಸರಬರಾಜು ತಂತಿಗಳಲ್ಲಿ ಉಂಟಾದ ಶಾರ್ಟ್ ಸರ್ಕೀಟ್ನಿಂದಾಗಿ ಹುಲ್ಲಿನ ಬವಣೆಯೊಂದು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಭಾನುವಾರ ಸಂಜೆ ಪಟ್ಟಣದ ಹಾನಗಲ್ ಮುಖ್ಯರಸ್ತೆಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ನಡೆದಿದೆ.

ಹನುಮಂತಪ್ಪ ಅವರಿಗೆ ಈ ಬಣವೆ ಸೇರಿದ್ದು ಅಂದಾಜು ₹ 20,000ಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎನ್ನಲಾಗಿದೆ. ಸ್ಥಳೀಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು.

‘ಅಗ್ನಿಶಾಮಕ ಠಾಣೆಯಲ್ಲಿ ಇದ್ದ ನೀರು ಸಾಗಣೆ ದೊಡ್ಡ ವಾಹನವನ್ನು 15 ವರ್ಷಗಳ ಅವಧಿ ಮುಗಿದಿದೆ ಎಂದು ಸರ್ಕಾರ ವಾಪಸ್ ಪಡೆದಿದೆ. ಹೊಸ ವಾಹನ ನೀಡಿಲ್ಲ. ಪರಿಣಾಮ 500 ಲೀಟರ್ ಸಾಮರ್ಥ್ಯದ ಸಣ್ಣ ವಾಹನದಲ್ಲಿ ನೀರು ತಂದು ಆರಿಸಬೇಕಿದೆ. ಇದು ಕಷ್ಟಸಾಧ್ಯವಾಗಿತು. ಬಣವೆ ಪೂರ್ಣ ಸುಡಲು ಇದು ಸಹ ಒಂದು ಕಾರಣವಾಯಿತು’ ಎಂದು ಸ್ಥಳೀಯರು ದೂರಿದರು.

‘ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ದೊಡ್ಡ ಪ್ರಮಾಣದ ಅಗ್ನಿ ಅನಾಹುತವಾದಲ್ಲಿ ಆಗಬಹುದಾಗ ತೊಂದರೆ ತಪ್ಪಿಸಲು ಕಷ್ಟವಾಗಲಿದೆ’ ಎಂದು ತಾಲ್ಲೂಕು ಯಾದವ ಸಮುದಾಯದ ಮುಖಂಡ ಎಚ್.ಆರ್. ವೆಂಕಟೇಶ್ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.