ನಾಯಕನಹಟ್ಟಿ: ಚಿನ್ನ ಮಾರಾಟದ ನೆಪದಲ್ಲಿ ನಕಲಿ ಚಿನ್ನ ನೀಡಿ ವಂಚಿಸುತ್ತಿದ್ದ ಅಂತರ ಜಿಲ್ಲಾ ವಂಚಕರ ತಂಡವನ್ನು ತಳಕು ಪೊಲೀಸರು ಬಂಧಿಸಿ 1.1 ಕೆ.ಜಿ ನಕಲಿ ಚಿನ್ನ ಮತ್ತು ₹ 27.77 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಅರವಿಂದ ಕುಮಾರ್ ಮತ್ತು ವಿಜಯನಗರ ಜಿಲ್ಲೆಯ ಮಾಚಿಹಳ್ಳಿ ಕೊರಚರಹಟ್ಟಿ ಗ್ರಾಮದ ನಾಗಪ್ಪ ಬಂಧಿತರು.

ಘಟನೆ ವಿವರ: ಬಂಧಿತ ವಂಚಕರ ತಂಡವು ತಮಿಳುನಾಡು ಮೂಲದ ವೆಲ್ಡನ್ ಎಂಬ ವ್ಯಕ್ತಿಗೆ ಕರೆಮಾಡಿ, ‘ನಾವು ಮನೆ ಕಟ್ಟಿಸುತ್ತಿದ್ದು, ಮನೆಯ ಬುನಾದಿ ತೆಗೆಯುವಾಗ ಸಾಕಷ್ಟು ಪ್ರಮಾಣದಲ್ಲಿ ಹಳೆಯ ಬಂಗಾರ ದೊರೆತಿದೆ. ಅದನ್ನು ಸ್ಥಳಿಯವಾಗಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಿಮಗೆ ಮಾರಾಟ ಮಾಡುತ್ತೇವೆ’ ಎಂದು ನಂಬಿಸಿ ₹ 30 ಲಕ್ಷ ಹಣ ತರಲು ಹೇಳಿದ್ದರು. ಅದರಂತೆ ವೆಲ್ಡನ್ ಅವರು ತಳಕು ಸಮೀಪದ ಚಿಕ್ಕಹಳ್ಳಿ ಗೇಟ್ ಬಳಿ ಬಂದಾಗ ಅಸಲಿ ಚಿನ್ನದ ನಾಣ್ಯವನ್ನು ತೋರಿಸಿ ನಂಬಿಸಿದ್ದರು. ನಂತರ ವೆಲ್ಡನ್ನಿಂದ ₹ 30 ಲಕ್ಷ ಪಡೆದು, ನಕಲಿ ಚಿನ್ನವನ್ನು ನೀಡಿದ್ದರು.

ವಂಚಕರು ಕೊಟ್ಟ ನಾಣ್ಯಗಳನ್ನು ಪರೀಕ್ಷಿಸಿದಾಗ ವಂಚನೆಗೆ ಒಳಗಾಗಿರುವುದು ತಿಳಿದಿದೆ. ನಕಲಿ ಚಿನ್ನ ಮಾರಾಟ ಮಾಡಿದವರು ಕೆಲವೇ ನಿಮಿಷಗಳಲ್ಲಿ ಹಣದೊಂದಿಗೆ ಪರಾರಿಯಾಗಿದ್ದರು. ವೆಲ್ಡನ್ ಈ ಕುರಿತು ತಳಕು ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತಕ್ಷಣವೇ ಕಾರ್ಯಪ್ರವೃತ್ತರಾದ ತಳಕು ಠಾಣೆ ಪೊಲೀಸರು ವಂಚಕರ ಮೊಬೈಲ್ ಜಾಡುಹಿಡಿದು 8 ದಿನಗಳೊಳಗೆ ಪತ್ತೆಹಚ್ಚಿ ಬಂಧಿಸಿದ್ದಾರೆ. ‘ವಂಚಕರ ತಂಡದಲ್ಲಿ ಇನ್ನೂ ಹಲವರಿದ್ದು, ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಬಲೆ ಬೀಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಎಸ್ಪಿ ರಂಜಿತ್ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸತ್ಯನಾರಾಯಣರಾವ್ ನಿರ್ದೇಶನದಲ್ಲಿ ಸಿಪಿಐ ಹನುಮಂತಪ್ಪ ಎಂ.ಶಿರೀಹಳ್ಳಿ, ಪಿಎಸ್ಐ ಕೆ.ಶಿಕುಮಾರ್, ಚೇತನ್, ಎಎಸ್ಐ ಮಂಜಣ್ಣ ಸೇರಿ ಪೊಲೀಸ್ ಸಿಬ್ಬಂದಿ ಈ ಪ್ರಕರಣದ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.