ಗುರುವಾರ , ಸೆಪ್ಟೆಂಬರ್ 19, 2019
26 °C

ಚಿತ್ರದುರ್ಗ: ಬೆಳೆ ನಾಶದಿಂದ ಮನನೊಂದು ರೈತ ಆತ್ಮಹತ್ಯೆ

Published:
Updated:

ಚಿತ್ರದುರ್ಗ: ತೆಂಗು ಹಾಗೂ ದಾಳಿಂಬೆ ನೀರಿಲ್ಲದೆ ಒಣಗಿದ್ದರಿಂದ ಮನನೊಂದ ರೈತ ಅಮೃತರಾಜ್‌ (45) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹಿರಿಯೂರು ತಾಲ್ಲೂಕಿನ ಆರನಕಟ್ಟೆ ಗ್ರಾಮದ ಅಮೃತರಾಜ್‌ ಮೃತಪಟ್ಟ ಸ್ಥಿತಿಯಲ್ಲಿ ಗುರುವಾರ ಜಮೀನಿನಲ್ಲಿ ಪತ್ತೆಯಾಗಿದ್ದರೆ. ಮೃತದೇಹದ ಬಳಿ ವಿಷದ ಬಾಟಲಿ ಪತ್ತೆಯಾಗಿದೆ. ಇವರು ವಿಜಯ ಬ್ಯಾಂಕಿನಲ್ಲಿ ₹ 5 ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ.

ತೆಂಗು ಹಾಗೂ ದಾಳಿಂಬೆ ಬೆಳೆ ಉಳಿಸಿಕೊಳ್ಳಲು ಅವರು ಶಕ್ತಿ ಮೀರಿ ಪ್ರಯತ್ನಿಸಿದ್ದರು. ಸಾಲ ಮಾಡಿ ಏಳು ಕೊಳವೆ ಬಾವಿ ಕೊರೆಸಿದ್ದರು. ಈ ಪೈಕಿ ಒಂದರಲ್ಲಿ ಮಾತ್ರ ನೀರು ಸಿಕ್ಕಿತ್ತು. ಆ ಕೊಳವೆ ಬಾವಿಯಲ್ಲಿಯೂ ಇತ್ತೀಚೆಗೆ ನೀರು ಕಡಿಮೆಯಾಗಿದ್ದರಿಂದ ಬೇಸರಗೊಂಡಿದ್ದರು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

Post Comments (+)