ಹೊಸದುರ್ಗ | ವಿ.ವಿ. ಸಾಗರ: ಹಿನ್ನೀರಲ್ಲಿ ಮುಳುಗಿದ ಹೂ ಬೆಳೆ !
ಸಂತೋಷ್ ಎಚ್.ಡಿ
Published : 26 ಅಕ್ಟೋಬರ್ 2025, 6:38 IST
Last Updated : 26 ಅಕ್ಟೋಬರ್ 2025, 6:38 IST
ಫಾಲೋ ಮಾಡಿ
Comments
ಹೊಸದುರ್ಗದ ಅಂಚಿಬಾರಿಹಟ್ಟಿಯ ಜಮೀನೊಂದರಲ್ಲಿನ ಸುಗಂಧರಾಜ ಹೂವಿನ ಬೆಳೆಯಲ್ಲಿ ನೀರು ನಿಂತಿರುವುದು
ಗಣೇಶ ಚತುರ್ಥಿ ದಿನದಿಂದು ₹ 1000ಕ್ಕೆ 10 ಮಾರು ಹೂ ಮಾರಾಟ ಮಾಡಲಾಗಿದೆ. ಅಂದಿನಿಂದ ಇಂದಿನವರೆಗೂ ₹ 100ಕ್ಕೆ 10 ಮಾರು ಬೆಲೆಯಿದೆ. ಮಳೆ ಬಂದು ಹೂ ಹಾಗೂ ಗಿಡಗಳು ನೆಲಕಚ್ಚಿವೆ. ಒಂದು ಎಕರೆಯಲ್ಲಿ ಹೊಸ ಬೆಳೆ ಬೆಳೆಯಲು ₹ 1 ಲಕ್ಷದಿಂದ ₹ 2 ಲಕ್ಷ ವ್ಯಯಿಸಲಾಗಿದೆ. ಆದಾಯ ಬರುವುದಿರಲಿ ಹಾಕಿದ ಖರ್ಚು ಕೂಡ ಬಂದಿಲ್ಲ. ಬರೀ ಸಸಿ ತರಲು ವ್ಯಯಿಸಿದ ಹಣ ಕೂಡ ಕೈಸೇರಿಲ್ಲ
– ಆರ್.ಶ್ರೀನಿವಾಸ್ ರೈತ ಅತ್ತಿಘಟ್ಟ
ಒಂದು ಎಕರೆಯಲ್ಲಿ ಸುಗಂಧರಾಜ ಹೂ ಬೆಳೆಯಲಾಗಿದೆ. ಹಿನ್ನೀರು ಆವರಿಸಿ ಹೂವು ಹಾಗೂ ಗಿಡಗಳು ನೀರಿನಿಂದ ಕೊಳೆಯುತ್ತಿವೆ. ರೋಗ ಬಂದಂತಾಗಿದೆ. ತೋಟಗಾರಿಕೆ ಬೆಳೆಗಳಾದ ತೆಂಗು ಅಡಿಕೆ ದಾಳಿಂಬೆ ಹೂ ಬೆಳೆಗಳೆಲ್ಲಾ ಜಲಾವೃತಗೊಂಡಿವೆ. ಇದುವರೆಗೂ ತೋಟಗಾರಿಕೆ ಇಲಾಖೆಯವರು ಭೇಟಿ ನೀಡಿಲ್ಲ ಪರಿಶೀಲಿಸಿಲ್ಲ