ಮಂಗಳವಾರ, ಮಾರ್ಚ್ 21, 2023
29 °C
ಭಾರಿ ಮೌಲ್ಯದ ಗಾಂಜಾ ಪತ್ತೆಯಾಗಿದ್ದು ರಾಜ್ಯದಲ್ಲಿ ಇದೇ ಮೊದಲು: ಎಸ್‌ಪಿ ಜಿ.ರಾಧಿಕಾ

ಗಾಂಜಾ ಮೌಲ್ಯ ₹ 4 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಮೊಳಕಾಲ್ಮುರು ತಾಲ್ಲೂಕಿನ ರಾಂಪುರ ಠಾಣಾ ವ್ಯಾಪ್ತಿಯ ವಡೇರಹಳ್ಳಿಯ ನಾಲ್ಕೂವರೆ ಎಕೆರೆಯಲ್ಲಿ ಪತ್ತೆಯಾದ ಗಾಂಜಾ ಬೆಳೆಯ ಮೌಲ್ಯ ₹ 4 ಕೋಟಿ ಎಂಬುದನ್ನು ಪೊಲೀಸರು ಮಂಗಳವಾರ ಖಚಿತಪಡಿಸಿದ್ದಾರೆ.

ಗುತ್ತಿಗೆ ಪಡೆದ ಜಮೀನಿನಲ್ಲಿ ಆರೋಪಿಗಳು 8,250 ಗಾಂಜಾ ಗಿಡಗಳನ್ನು ಬೆಳೆದಿದ್ದರು. ಮೂರು ಮೀಟರ್‌ ಎತ್ತರದ ಗಾಂಜಾ ಗಿಡವನ್ನು ತೂಕ ಹಾಕಲಾಗಿದ್ದು, 9,871 ಕೆ.ಜಿ. ಇದೆ ಎಂಬುದು ಗೊತ್ತಾಗಿದೆ. ಪ್ರತಿ ಗಿಡದಲ್ಲಿ ಕೆ.ಜಿ.ಗೂ ಅಧಿಕ ಗಾಂಜಾ ಸೊಪ್ಪು ಸಿಕ್ಕಿದೆ. ಭಾರಿ ಮೌಲ್ಯದ ಗಾಂಜಾ ಪತ್ತೆಯಾಗಿದ್ದು ರಾಜ್ಯದಲ್ಲಿ ಇದೇ ಮೊದಲು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಆರು ತಿಂಗಳ ಬೆಳೆ ಹುಲುಸಾಗಿತ್ತು. ಎರಡು ತಿಂಗಳಲ್ಲಿ ಪೆಡ್ಲರ್‌ಗಳ ಕೈಗೆ ಸಿಗುತ್ತಿತ್ತು. ಸೊಪ್ಪು ಒಣಗಿಸಿ, ಪೌಡರ್‌ ರೂಪಕ್ಕೆ ತಂದು ಪ್ಯಾಕೇಟ್‌ ಮಾಡಲು ಆರೋಪಿಗಳು ಮುಂದಾಗಿದ್ದರು. ಇದು ಎಲ್ಲಿಗೆ ಸರಬರಾಜು ಆಗುತ್ತಿತ್ತು ಎಂಬುದು ಪತ್ತೆಯಾಗಬೇಕಿದೆ. ಗಿಡಗಳನ್ನು ಕಿತ್ತು ತೂಕಹಾಕಲು ನಾಲ್ಕು ದಿನ ಹಿಡಿಯಿತು’ ಎಂದು ಮಾಹಿತಿ ನೀಡಿದರು.

ಸೆ.4ರಂದು ಗಾಂಜಾ ಪತ್ತೆಯಾಗಿ, ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ₹ 2 ಕೋಟಿ ಮೌಲ್ಯದ ಗಾಂಜಾ ಎಂದು ಆರಂಭದಲ್ಲಿ ಅಂದಾಜಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು