ನಾನು ಮಾರಾಟಕ್ಕಿಲ್ಲ: ಗೂಳಿಹಟ್ಟಿ

7

ನಾನು ಮಾರಾಟಕ್ಕಿಲ್ಲ: ಗೂಳಿಹಟ್ಟಿ

Published:
Updated:
Prajavani

ಚಿತ್ರದುರ್ಗ: ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಡಿ.ಶೇಖರ್‌, ‘ಐ ಆ್ಯಮ್‌ ಗೂಳಿಹಟ್ಟಿ, ನಾನು ಮಾರಾಟಕ್ಕಿಲ್ಲ’ ಎಂದು ವಾಟ್ಸ್‌ ಆ್ಯಪ್‌ ಸ್ಟೇಟಸ್‌ ಹಾಕಿಕೊಂಡಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಬಿಜೆಪಿಯ ‘ಆಪರೇಷನ್‌ ಕಮಲ’ಕ್ಕೆ ಕಾಂಗ್ರೆಸ್‌–ಜೆಡಿಎಸ್‌ ಮಿತ್ರ ಪಕ್ಷಗಳು ಪ್ರತಿದಾಳ ಉರುಳಿಸಿದ ಬೆನ್ನಲ್ಲೇ ಶಾಸಕ ಹಾಕಿಕೊಂಡಿರುವ ಸ್ಟೇಟಸ್‌ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಪರಿಶಿಷ್ಟ ಜಾತಿಗೆ ಸೇರಿದ ನನಗೆ ಸಾಮಾನ್ಯ ಕ್ಷೇತ್ರದಲ್ಲಿ ಟಿಕೆಟ್‌ ನೀಡಿ ಬಿಜೆಪಿ ಔಧಾರ್ಯ ಮೆರೆದಿದೆ. ಕ್ಷೇತ್ರದ ಮತದಾರರು 92 ಸಾವಿರ ಮತ ನೀಡಿ ಆಯ್ಕೆ ಮಾಡಿದ್ದಾರೆ. ನನ್ನ ಹೆಸರಿಗೆ ಕಪ್ಪು ಮಸಿ ಬಳಿಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುವ ಉದ್ದೇಶದಿಂದ ಈ ಸ್ಟೇಟಸ್‌ ಹಾಕಿಕೊಂಡಿದ್ದೆ’ ಎಂದು ಗೂಳಿಹಟ್ಟಿ ಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !