ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಹದ ಮಳೆ: ಶೇಂಗಾಕ್ಕೆ ಅನುಕೂಲ

Last Updated 28 ಆಗಸ್ಟ್ 2022, 3:17 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ವಿವಿಧೆಡೆ ಶುಕ್ರವಾರ ರಾತ್ರಿ ಹದವಾದ ಮಳೆಯಾಗಿದ್ದು, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳಿಗೆ ಅನುಕೂಲವಾಗಿದೆ.

ಬಿತ್ತನೆ ನಂತರ ಒಂದು ಬಾರಿಯೂ ಮಳೆ ಬಾರದೆ ರೈತರು ಆತಂಕದಲ್ಲಿದ್ದು, ಒಂದು ವಾರದಲ್ಲಿ ಮಳೆ ಬಾರದಿದ್ದಲ್ಲಿ ಬೆಳೆ ಕೈತಪ್ಪುವ ಸಾಧ್ಯತೆ ದಟ್ಟವಾಗಿತ್ತು.ಮಳೆಯು ಸಂಜೀವಿನಿ ರೀತಿಯಲ್ಲಿ ಬಂದಿದೆ. ಇನ್ನೂ ಮಳೆಯ ಅವಶ್ಯಕತೆ ಇದೆ ಎಂದು ರೈತರು ಹೇಳಿದರು.

ಬಿ.ಜಿ. ಕೆರೆ, ಕೊಂಡ್ಲಹಳ್ಳಿ, ಕೋನಸಾಗರ, ನೇರ್ಲಹಳ್ಳಿ, ಮೊಳಕಾಲ್ಮುರು ಸುತ್ತಲಿನ ಪ್ರದೇಶ, ನಾಗಸಮುದ್ರ, ರಾಯಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಉತ್ತಮ ಮಳೆಯಾಗಿದೆ. ಇಲ್ಲಿ ಪ್ರಮುಖವಾಗಿ ಬಾಡುತ್ತಿದ್ದ ಶೇಂಗಾಕ್ಕೆ ಹೆಚ್ಚಿನ ಅನುಕೂಲವಾಗಿದೆ ಎಂದು ಕೃಷಿ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕಡಾ.ವಿ.ಸಿ.ಉಮೇಶ್ ಹೇಳಿದರು.

ತಾಲ್ಲೂಕು ಕಚೇರಿ ಮೂಲಗಳ ಪ್ರಕಾರ ಮೊಳಕಾಲ್ಮುರು ಪಟ್ಟಣದಲ್ಲಿ 41.2 ಮಿ.ಮೀ., ರಾಯಾಪುರ–32 ಮಿ.ಮೀ., ಬಿ.ಜಿ. ಕೆರೆ –24.2 ಮಿಮೀ, ರಾಂಪುರ–4.2 ಮಿ.ಮೀ, ದೇವಸಮುದ್ರ –10.2 ಮಿ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT