ಹೊಸದುರ್ಗ: ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದು ಹೋಗಿದ್ದ ಅಂದಾಜು 25 ಮೊಬೈಲ್ಗಳನ್ನು ಪೊಲೀಸರು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಮಾಡಿ, ಮಂಗಳವಾರ ವಾರಸುದಾರರಿಗೆ ಹಸ್ತಾಂತರಿಸಿದರು.

‘ಮೊಬೈಲ್ ಕಳೆದು ಹೋದಾಗ ಗಾಬರಿಯಾಗಬೇಡಿ. ಕರ್ನಾಟಕ ಸ್ಟೇಟ್ ಪೊಲೀಸ್ ಆ್ಯಪ್ ಅಥವಾ ವೆಬ್ ಸೈಟ್ನಲ್ಲಿ ಇ–ಲಾಸ್ಟ್ ಬಗ್ಗೆ ಸ್ವಯಂ ದೂರು ದಾಖಲಿಸಬೇಕು. ಅಥವಾ ಹತ್ತಿರದ ಠಾಣೆಗೆ ದೂರು ನೀಡಬೇಕು. ಕಳೆದು ಹೋದ ಮೊಬೈಲ್ನಲ್ಲಿದ್ದ ನಂಬರ್ನಲ್ಲಿ ಡುಪ್ಲಿಕೇಟ್ ಸಿಮ್ ಪಡೆಯಬೇಕು. ನಂತರ ಒಟಿಪಿ ಮೂಲಕ ಸಿಇಐಆರ್ ಪೋರ್ಟಲ್ನಲ್ಲಿ ಕಳೆದು ಹೋದ ಮೊಬೈಲ್ ನಂಬರ್ ಬ್ಲಾಕ್ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಮೊಬೈಲ್ ಯಾರಾದರೂ ಉಪಯೋಗಿಸುತ್ತಿದ್ದಾರೆಯೇ ಎಂದು ಕೂಡಲೇ ಪತ್ತೆಮಾಡಬಹುದು ಎಂದು ಇನ್ಸ್ಪೆಕ್ಟರ್ ಕೆ.ಟಿ. ರಮೇಶ್ ಮಾಹಿತಿ ನೀಡಿದ್ದಾರೆ.

ಪಿಎಸ್ಐ ಶ್ರೀಶೈಲ, ಸಿಬ್ಬಂದಿ ಮಹಮ್ಮದ್ ರಫಿ, ರಾಜಣ್ಣ, ಚಂದ್ರಪ್ಪ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.