ಶುಕ್ರವಾರ ಐಐಎಸ್‌ಸಿ ಕೇಂದ್ರವನ್ನು ಮಕ್ಕಳಿಗಾಗಿ ತೆರೆಯಲಾಗುತ್ತಿದೆ. ಗಣಿತ ಭೌತ ರಾಸಾಯನಿಕ ವಿಜ್ಞಾನಗಳ ಪ್ರಯೋಗಳನ್ನೂ ಮಕ್ಕಳಿಗೆ ತೋರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ
ಸುಬ್ಬಾರೆಡ್ಡಿ ಸಂಚಾಲಕ ಮುಖ್ಯಸ್ಥ ಐಐಎಸ್‌ಸಿ ಕುದಾಪುರ
ರಾಕೆಟ್ ಉಡಾವಣೆಯ ಆಕರ್ಷಣೆ
ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಶುಕ್ರವಾರ ಕುದಾಪುರ ಐಐಎಸ್‌ಸಿ ಅಂಗಳದಲ್ಲಿ ರಾಕೆಟ್ ಮಾದರಿ ಉಡಾವಣಾ ಪ್ರಯೋಗಕ್ಕೆ ವಿದ್ಯಾರ್ಥಿಗಳು ಸಾಕ್ಷಿಯಾಗಲಿದ್ದಾರೆ. ಅದಕ್ಕಾಗಿ ವಿಜ್ಞಾನಿಗಳು ಉಡಾವಣಾ ಸ್ಥಳವನ್ನು ಸಿದ್ಧಗೊಳಿಸಿದ್ದಾರೆ. ಉಡಾವಣಾ ವಾಹಕ ಮಾದರಿ ಯಂತ್ರ ಕೂಡ ಸಿದ್ಧಗೊಂಡಿದ್ದು ರಾಕೆಟ್ ವಾಯುನೆಲೆ ಸೇರ್ಪಡೆಗೊಳ್ಳುವ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ವಿವರಿಸಲಿದ್ದಾರೆ. ಜೊತೆಗೆ ವಿವಿಧ ಮಾದರಿಯ ಡ್ರೋಣ್ ಹಾರಾಟದ ಪ್ರ್ಯಾತ್ಯಕ್ಷಿಕೆಗಳು ಕೂಡ ನಡೆಯಲಿವೆ.