ಹೊಸದುರ್ಗ: ಇಲ್ಲಿನ ಪುರಸಭೆಯಲ್ಲಿ ಬುಧವಾರ ಸ್ವಯಂ ಚಾಲಿತ ಸ್ಯಾನಿಟೈಸರ್ ಯಂತ್ರವನ್ನು ಅಳವಡಿಸಲಾಗಿದೆ.

ಪುರಸಭೆಗೆ ಪ್ರತಿದಿನವೂ ವಿವಿಧ ಕೆಲಸ, ಕಾರ್ಯಕ್ಕೆ ನೂರಾರು ಸಾರ್ವಜನಿಕರು ಬರುತ್ತಾರೆ. ಹಾಗಾಗಿ ಕೊರೊನಾ ವೈರಾಣು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ಮುಖ್ಯಕಟ್ಟಡ ಹಾಗೂ ಆರೋಗ್ಯ ಶಾಖೆ ಕಚೇರಿ ಮುಂಭಾಗದಲ್ಲಿ 2 ಯಂತ್ರಗಳನ್ನು ಅಳವಡಿಸಲಾಗಿದೆ.

ಕಾರ್ಯಾಲಯಕ್ಕೆ ಬರುವ ಜನರು ಈ ಸೋಂಕು ನಿವಾರಣೆ ಯಂತ್ರದ ಕೆಳಗೆ ಕೈಯಿಡುತ್ತಿದಂತೆ ಸ್ವಯಂ ಚಾಲಿತವಾಗಿ ಸ್ಯಾನಿಟೈಸೇಷನ್ ಆಗುತ್ತದೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು, ಇಲ್ಲಿ ಸ್ಯಾನಿಟೈಸರ್ ಮಾಡಿಕೊಂಡ ನಂತರವೇ ಪರಸ್ಪರ ಅಂತರ ಕಾಪಾಡಿಕೊಂಡುಕಚೇರಿ ಒಳಗೆ ಪ್ರವೇಶಿಸುವಂತೆ ಸೂಚಿಸಲಾಗಿದೆ.

ಮಾಸ್ಕ್ ಧರಿಸದಿದ್ದರೆ ₹ 100 ದಂಡ ವಿಧಿಸಲಾಗುವುದು. ಯಾವುದೇ ವ್ಯಕ್ತಿ, ವ್ಯಾಪಾರಿಗಳು ಪದೇ, ಪದೇ ನಿಯಮ ಉಲ್ಲಂಘಿಸಿದರೆ ದೂರು ದಾಖಲಿಸಲಾಗುವುದು ಎಂದು ಪುರಸಭೆ ಪರಿಸರ ಎಂಜಿನಿಯರ್ ಜಿ. ವಿ. ತಿಮ್ಮರಾಜು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.