ಚಿತ್ರದುರ್ಗ: ‘ಒಳಮೀಸಲಾತಿ ಜಾರಿಗೆ ದಿನಗಣನೆ ಆರಂಭವಾಗಿದ್ದು ಆಗಸ್ಟ್ನಲ್ಲಿ ಜಾರಿಯಾಗುವುದು ನಿಶ್ಚಿತ. ತ್ವರಿತ ಜಾರಿಗೆ ಆಗ್ರಹಿಸಿ ಯಾರೂ ಚಳವಳಿ ಹಾದಿ ತುಳಿಯುವುದು ಬೇಡ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಮನವಿ ಮಾಡಿದರು.

‘ಆಗಸ್ಟ್ನಲ್ಲಿ ಮಾದಿಗ ಸಮುದಾಯಕ್ಕೆ ನಿಜವಾದ ಸ್ವಾತಂತ್ರ್ಯ ದೊರೆಯಲಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ ಸ್ವಾತಂತ್ರ್ಯ ಸಿಗಲಿದೆ. ಮೂರು ದಶಕಗಳಿಂದ ಕನಸಾಗಿದ್ದ ಮೀಸಲಾತಿ, ಸೌಲಭ್ಯ, ಅವಕಾಶ ಸಿಗಲಿವೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಮೀಕ್ಷೆ ಪೂರ್ಣಗೊಂಡಿದ್ದು, ಶೀಘ್ರ ಅಂತಿಮ ವರದಿ ಸಲ್ಲಿಕೆಯಾಗಲಿದೆ. ಬಂದ್ನಿಂದ ಯಾವ ಉಪಯೋಗವೂ ಇಲ್ಲ. ಮಾದಿಗರ ಒಳಮೀಸಲಾತಿ ವಿಷಯದಿಂದ ಸಾರ್ವಜನಿಕರಿಗೆ ಏಕೆ ತೊಂದರೆ ಕೊಡಬೇಕು?’ ಎಂದು ಪ್ರಶ್ನಿಸಿದರು.

‘ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಹೆಸರಿನಲ್ಲಿ ಎರಡು ಸಮುದಾಯಗಳ ಜನರು ಪ್ರಮಾಣಪತ್ರ ಪಡೆಯುತ್ತಿದ್ದ ಕಾರಣ ಗೊಂದಲವಿತ್ತು. ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ಕ್ರಮ ವಹಿಸಲಾಗಿದೆ. ಸಮುದಾಯಗಳ ಹಿಂದುಳಿದಿರುವಿಕೆ ಸಂಬಂಧ ಅಧ್ಯಯನ ನಡೆಯುತ್ತಿದ್ದು, ಈ ತಿಂಗಳೊಳಗೆ ವರದಿ ಸಲ್ಲಿಕೆಯಾಗಲಿದೆ’ ಎಂದರು.

‘ಒಳಮೀಸಲಾತಿ ಜಾರಿಗೊಳಿಸುವ ಅನಿವಾರ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಕಾಳಜಿ ಇದೆ. ವಯಸ್ಸು ಮೀರಿದ ಉದ್ಯೋಗಾಕಾಂಕ್ಷಿಗಳಿಗೆ ಒಂದು ವರ್ಷ ಸಡಿಲಿಕೆ ನೀಡುವಂತೆ ಈಗಾಗಲೇ ಮನವಿ ಮಾಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.