ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಸಿದ್ದಾಂತವಿಲ್ಲ, ಜೆ.ಪಿ.ನಡ್ಡಾಗೆ ರಾಜಕೀಯ ಜ್ಞಾನವೂ ಇಲ್ಲ: ಸಿದ್ದರಾಮಯ್ಯ

Last Updated 22 ಫೆಬ್ರುವರಿ 2023, 7:41 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟಿಲ್‌ಗೆ ರಾಜಕೀಯ ಪರಿಜ್ಞಾನ ಇಲ್ಲ ಅಂದುಕೊಂಡಿದ್ದೆ. ಆದರೆ ಈಗ ಅರ್ಥವಾಗುತ್ತಿದೆ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೂ ರಾಜಕೀಯ ಜ್ಞಾನ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುಟುಕಿದರು.

'ಕಾಂಗ್ರೆಸ್ ಪಕ್ಷಕ್ಕೆ ಸಿದ್ಧಾಂತ ಇಲ್ಲ. ಸಿದ್ದರಾಮಯ್ಯ ಕಡು ಭ್ರಷ್ಟ' ಎಂಬ ಜೆ.ಪಿ.ನಡ್ಡಾ ಅವರ ಆರೋಪಕ್ಕೆ ಇಲ್ಲಿನ ಖಾಸಗಿ ಹೆಲಿಪ್ಯಾಡ್‌ನಲ್ಲಿ ಬುಧವಾರ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, 'ಬಿಜೆಪಿಗೆ ಸಿದ್ದಾಂತ ಇಲ್ಲ. ಜನರನ್ನು ಪ್ರಚೋದಿಸಿ, ದ್ವೇಷದ ರಾಜಕಾರಣ ಮಾಡುವುದು ಹಾಗೂ ಸಿದ್ದರಾಮಯ್ಯ ಅವರನ್ನು ಮುಗಿಸಿ ಎನ್ನುವುದು ಸಿದ್ಧಾಂತವಾ' ಎಂದು ಪ್ರಶ್ನಿಸಿದರು.

'ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿಯ ರಾಷ್ಟ್ರೀಯ ನಾಯಕರು ನೂರು‌ ಬಾರಿ ಕರ್ನಾಟಕಕ್ಕೆ ಬಂದರೂ ಪ್ರಯೋಜನವಾಗದು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ. ರಾಜ್ಯದ ಜನರು ಈಗಾಗಲೇ ತೀರ್ಮಾನ ಮಾಡಿದ್ದಾರೆ' ಎಂದು ಹೇಳಿದರು.

'ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಭಾರೀ ಅವ್ಯವಹಾರ ಆಗಿದ್ದರೆ ತನಿಖೆ ಮಾಡಿಸಿ. ನಮ್ಮ ಕಾಲದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ದಾಖಲೆ ಇದ್ದರೆ ಕ್ರಮ ಕೈಗೊಳ್ಳಿ. ಸರ್ಕಾರ ನಿಮ್ಮದೇ ಇದೆ, ನೀವೇ ಅಧಿಕಾರದಲ್ಲಿದ್ದೀರಿ, ನಿಮ್ಮ ಕೈ ಯಾರು ಹಿಡಿದಿದ್ದಾರೆ, ಯಾಕೆ ಹಿಂದೇಟು ಹಾಕುತ್ತೀರಿ' ಎಂದು ಪ್ರಶ್ನಿಸಿದರು.

'ಎಲ್ಲ ಜಾತಿ ಧರ್ಮಗಳ ಬಗ್ಗೆ ಗೌರವ ಇಟ್ಟುಕೊಂಡಿರುವವರು‌ ನಾವು. ನಾವು ಯಾರ ಓಲೈಕೆಯನ್ನೂ ಮಾಡಯವುದಿಲ್ಲ.‌ಮನುಷ್ಯತ್ವದ ರಾಜಕಾರಣ ಮಾಡುತ್ತೇವೆ. ಹಿಂದೂ, ಮುಸ್ಲಿಂ ಎಲ್ಲರೂ ಮನುಷ್ಯರು. ಅನ್ನಭಾಗ್ಯ, ಕ್ಷೀರ ಭಾಗ್ಯ ಯೋಜನೆಗಳನ್ನು ಎಲ್ಲ ಜಾತಿಯ ಬಡವರಿಗೆ ಕೊಟ್ಟಿದ್ದೇವೆ. ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಇವೆಲ್ಲ ಗೊತ್ತಾಗುವುದಿಲ್ಲ' ಎಂದರು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT