ನಗರದಲ್ಲಿ 25 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಒಟ್ಟು 8,170 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ ಬೆಳಿಗ್ಗೆ ನಡೆದ ಪತ್ರಿಕೆ-1 ರ ಪರೀಕ್ಷೆಗೆ 3,736 ಅಭ್ಯರ್ಥಿಗಳು ಹಾಜರಾದರೆ, 4,434 ಅಭ್ಯರ್ಥಿಗಳು ಗೈರು ಹಾಜರಾದರು. ಮಧ್ಯಾಹ್ನ ನಡೆದ ಪತ್ರಿಕೆ-2ರ ಪರೀಕ್ಷೆಗೆ 3,704 ಅಭ್ಯರ್ಥಿಗಳು ಹಾಜರಾಗಿ, 4,466 ಅಭ್ಯರ್ಥಿಗಳು ಗೈರಾಗಿದ್ದಾರೆ.