ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವಸಮುದ್ರ ಬಳಿ 2 ಚಿರತೆ ಪ್ರತ್ಯಕ್ಷ

Published 14 ಜನವರಿ 2024, 15:58 IST
Last Updated 14 ಜನವರಿ 2024, 15:58 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ದೇವಸಮುದ್ರ ಬಳಿ ಕೆಲ ದಿನಗಳಿಂದ 2 ಚಿರತೆಗಳು ಕಾಣಿಸಿಕೊಂಡಿದ್ದು, ಜನರು ಆತಂಕಗೊಂಡಿದ್ದಾರೆ. ಗ್ರಾಮದ ಪರಮೇಶ್ವರಪ್ಪ ತಾತಾ ಮಠದ ಮುಂಭಾಗದಲ್ಲಿರುವ ಬೆಟ್ಟದಲ್ಲಿ ಈ ಚಿರತೆ ಕಾಣಿಸಿಕೊಂಡಿವೆ. 15 ಕ್ಕೂ ಹೆಚ್ಚು ದಿನಗಳಿಂದ ಆಗಾಗ ಬೆಟ್ಟದ ತುದಿಯಲ್ಲಿ ಕಾಣಿಕೊಳ್ಳುತ್ತಿವೆ. ಇದರಿಂದ ಕುರಿಗಾಹಿಗಳು, ಜಾನುವಾರುಗಳನ್ನು ಮೇಯಿಸುವವರು ಆತಂಕಗೊಂಡಿದ್ದಾರೆ.

ಕುರಿಗಾಹಿಗಳಾದ ಲಕ್ಷ್ಮಣ, ಭೈರಪ್ಪ ಅವರಿಗೆ ಸೇರಿದ ತಲಾ ಒಂದು ಮೇಕೆ, ಬಸಣ್ಣ ಅವರಿಗೆ ಸೇರಿದ ಒಂದು ಕುರಿ, ಇವರ ಕುರಿಹಟ್ಟಿಗಳ 2 ನಾಯಿಗಳು ಈಚೆಗೆ ಚಿರತೆ ದಾಳಿಗೆ ಬಲಿಯಾಗಿವೆ. ಆಗಾಗ ಚಿರೆತೆಗಳು ಬೆಟ್ಟದಿಂದ ಆಹಾರ ಹುಡುಕಿಕೊಂಡು ಬಂದು ಹೋಗುತ್ತಿವೆ. ಇದರಿಂದ ಕೃಷಿ ಕಾರ್ಮಿಕರು, ಜಾನುವಾರು ಪೋಷಕರು ಹೆಚ್ಚು ತೊಂದರೆಗೀಡಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಮಾರಸ್ವಾಮಿ ಹೇಳಿದರು.

ತಾಲ್ಲೂಕು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಡಿ.ಎಲ್. ಶ್ರೀಹರ್ಷ ಮಾತನಾಡಿ, ಚಿರತೆಗಳು ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸ್ಥಳಕ್ಕೆ ಸಿಬ್ಬಂದಿಯನ್ನು ಕಳಿಸಿ ಕೊಡಲಾಗಿತ್ತು. ಚಿರತೆ ಚಲನವಲನಗಳ ಬಗ್ಗೆ ಸಳೀಯರಿಂದ ಮಾಹಿತಿ ಸಂಗ್ರಹಿಸಲಾಗಿದ್ದು, 2 ದಿನಗಳಲ್ಲಿ ಬೋನ್ ಇಟ್ಟು ಚಿರತೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು. ಚಿರತೆಗಳು ಕಾಣಿಸಿಕೊಂಡಿರುವ ಪ್ರದೇಶವು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT