ಹೊಸದುರ್ಗ: ‘ಲಿಂಗಾಯತ ಧರ್ಮದ ಇತಿಹಾಸ, ಸಿದ್ಧಾಂತ, ನಿಜ ಆಚರಣೆಗಳು, ಶಿವಯೋಗ, ಸಂಘಟನೆ ಕುರಿತು ಅರಿವು ಮೂಡಿಸಲು ಡಿ. 27 ರಿಂದ ಮೂರು ದಿನ ಸಾಣೇಹಳ್ಳಿಯ ತರಳಬಾಳು ಶಾಖಾ ಮಠದಲ್ಲಿ ಅಧ್ಯಯನ ಶಿಬಿರ ಏರ್ಪಡಿಸಿದೆ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

‘35 ವರ್ಷದೊಳಗಿನ ಆಸಕ್ತರು ₹ 200 ಪ್ರವೇಶ ಶುಲ್ಕ ಪಾವತಿಸಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಶಿಬಿರಾರ್ಥಿಗಳಿಗೆ ನೋಟ್ ಪುಸ್ತಕ ಸೇರಿ ಇತರ ಪರಿಕರ ಒದಗಿಸಲಾಗುವುದು. ಉಪಾಹಾರ ಹಾಗೂ ಬೇರೆ ಊರುಗಳಿಂದ ಬರುವವರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

‘100 ರಿಂದ 150 ಜನರಿಗೆ ಮಾತ್ರ ಪ್ರವೇಶ ಇದೆ. ಮೊದಲು ನೋಂದಣಿಯಾದವರಿಗೆ ಆದ್ಯತೆ. ಮಾಹಿತಿಗಾಗಿ ಟಿ.ಎಂ. ಮರುಳಸಿದ್ಧಯ್ಯ (ಮೊ; 9663177254) ಅವರನ್ನು ಸಂಪರ್ಕಿಸಬಹುದು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.