ಮೊಳಕಾಲ್ಮುರು: ‘ಶೌರ್ಯ, ಪರಾಕ್ರಮಕ್ಕೆ ರಾಜವೀರ ಮದಕರಿ ನಾಯಕ ಹೆಸರು ವಾಸಿಯಾಗಿದ್ದು, ಚಿತ್ರದುರ್ಗ ಜಿಲ್ಲೆಗೆ ಇವರ ಕೊಡುಗೆ ಅನನ್ಯ ಮತ್ತು ಸ್ಮರಣೀಯ’ ಎಂದು ಬಿಜೆಪಿ ಹಿರಿಯ ಮುಖಂಡ ಪಿ.ಎಂ. ಮಂಜುನಾಥ್ ಹೇಳಿದರು.

ಸೋಮವಾರ ಮಹರ್ಷಿ ವಾಲ್ಮೀಕಿ ಹಿತರಕ್ಷಣಾ ವೇದಿಕೆಯಿಂದ ಇಲ್ಲಿ ಹಮ್ಮಿಕೊಂಡಿದ್ದ ರಾಜವೀರ ಮದಕರಿ ನಾಯಕ ಜಯಂತಿಯಲ್ಲಿ ಅವರು ಮಾತನಾಡಿದರು.

ಚಿತ್ರದುರ್ಗ ಸೇರಿದಂತೆ ಜಿಲ್ಲೆಯ ಹಲವು ಸ್ಥಳಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಲು ಮದಕರಿನಾಯಕ ಮುಖ್ಯ ಕಾರಣ. ಒಂದು ಜಾತಿಗೆ ಮದಕರಿ ಅವರನ್ನು ಸೀಮಿತ ಮಾಡದೆ ಎಲ್ಲರೂ ಅವರ ಸಾಧನೆಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹಾನಗಲ್ ತಿಪ್ಪೇಸ್ವಾಮಿ, ಮುಖಂಡರಾದ ಹಣ್ಣಿನ ಸಿದ್ದಣ್ಣ, ಕೆ.ಬಿ. ಮಹೇಶ್, ಬಿ.ಎನ್. ಮಂಜಣ್ಣ, ನೇರ್ಲಹಳ್ಳಿ ಪ್ರಭಾಕರ್, ಹೇಮಂತ ಕುಮಾರ್, ಸೂರಯ್ಯ, ಹರೀಶ್ ಕುಮಾರ್, ದರ್ಶನ್, ಬಸವರಾಜ್ ಮಣಿಕಂಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.