ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

Last Updated 26 ಜೂನ್ 2022, 12:39 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಾಲಕಿಯನ್ನು ವಿವಾಹವಾದ ಪತಿ ಹಾಗೂ ಆತನ ಮೂವರು ಸ್ನೇಹಿತರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ನಗರದಲ್ಲಿ ನಡೆದಿದೆ. 17 ವರ್ಷದ ಬಾಲಕಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ತವರಿಗೆ ತೆರಳಿದ್ದ ಬಾಲಕಿಯನ್ನು ನಿರ್ಮಾಣ ಹಂತದ ಕಟ್ಟಡಕ್ಕೆ ಎಳೆದೊಯ್ದು ಕೃತ್ಯ ಎಸಗಲಾಗಿದೆ. ಬಾಲಕಿಯ ಪತಿ ಹಾಗೂ ಆತನ ಸ್ನೇಹಿತರ ವಿರುದ್ಧ ಅತ್ಯಾಚಾರ, ಕೊಲೆ ಯತ್ನ ಹಾಗೂ ಬಾಲ್ಯವಿವಾಹ ತಡೆ ಕಾಯ್ದೆಯಡಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂನ್‌ 7ರಂದು ಬಾಲಕಿಗೆ ದೂರವಾಣಿ ಕರೆ ಮಾಡಿದ ಪತಿ, ಮಾಳಪ್ಪನಹಟ್ಟಿ ರಸ್ತೆಯ ಬಳಿ ಬರುವಂತೆ ಸೂಚಿಸಿದ್ದಾನೆ. ನಿರ್ಜನ ಪ್ರದೇಶದಲ್ಲಿರುವ ನಿರ್ಮಾಣ ಹಂತದ ಕಟ್ಟಡಕ್ಕೆ ಎಳೆದೊಯ್ದ ಪತಿಯೊಂದಿಗೆ ಮೂವರು ಸ್ನೇಹಿತರು ಇದ್ದರು. ಅಕ್ರಮ ಸಂಬಂಧದ ವಿಚಾರವಾಗಿ ಪತಿ ಹಾಗೂ ಬಾಲಕಿಯ ನಡುವೆ ಗಲಾಟೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ವಿವಸ್ತ್ರಗೊಳಿಸಿ ಸಿಗರೇಟಿನಿಂದ ದೇಹ ಸುಟ್ಟರು. ಅತ್ಯಾಚಾರ ನಡೆಸಲು ಮುಂದಾದಾಗ ಕೂಗಾಡುತ್ತಿದ್ದೆ. ತಲೆಗೆ ಬಿದ್ದ ಬಲವಾದ ಏಟಿನಿಂದ ಪ್ರಜ್ಞೆ ಕಳೆದುಕೊಂಡೆ. ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವಾಗ ಪ್ರಜ್ಞೆ ಮರಳಿತು. ಘಟನೆಯ ಬಗ್ಗೆ ಬಾಯಿಬಿಟ್ಟರೆ ಕೊಲೆ ಮಾಡುವುದಾಗಿ ಪತಿ ಬೆದರಿಸಿದ್ದನು’ ಎಂದು ದೂರಿನಲ್ಲಿ ಬಾಲಕಿ ವಿವರಿಸಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT