‘ಚಿತ್ರದುರ್ಗ ತಾಲ್ಲೂಕಿನ ಮಲ್ಲನಕಟ್ಟೆ ಸಮೀಪದ ಕ್ರಷರ್‌ಗೆ ಬಂದಿದ್ದ ಭೂವಿಜ್ಞಾನಿ, ಮಾಮೂಲಿ ನೀಡುವಂತೆ ಪೀಡಿಸಿದರು. ಈ ಕುರಿತು ಮಾತನಾಡಲು ಖಾಸಗಿ ಹೋಟೆಲ್‌ನಲ್ಲಿ ಫೆ.8ರಂದು ರಾತ್ರಿ ಸೇರಿದ್ದೆವು. ಕ್ರಷರ್‌ವೊಂದರಿಂದ ಪ್ರತಿ ತಿಂಗಳು ₹ 5 ಲಕ್ಷ ಮಾಮೂಲಿ ನೀಡುವಂತೆ ಒತ್ತಾಯಿಸಿದರು. ಏಕಾಏಕಿ ಹಲ್ಲೆ ನಡೆಸಿ ಮುಖಕ್ಕೆ ಗಾಯ ಮಾಡಿದರು’ ಎಂದು ನಗರ ಠಾಣೆಗೆ ನೀಡಿದ ದೂರಿನಲ್ಲಿ ಮಜೀದ್ ಆರೋಪಿಸಿದ್ದಾರೆ.