ಸಾರ್ವಜನಿಕರು ಈ ವೇಳೆ ಚಳ್ಳಕೆರೆ ಗೇಟ್‌ನಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕರ ವಿರುದ್ಧವೂ ಕಿಡಿಕಾರಿದರು. ಗಣಿ ಲಾರಿಗಳಿಗೆ ಡೀಸೆಲ್ ಹಾಕಬಾರದು. ಟ್ರಾಫಿಕ್ ಜಾಮ್ ಮಾಡಿ ಡೀಸೆಲ್ ಹಾಕಬೇಕಾ? ಮತ್ತೊಮ್ಮೆ ಗಣಿ ಲಾರಿಗಳಿಗೆ ಡೀಸೆಲ್ ಹಾಕಿದರೆ ಬಂಕ್‌ನ ಲೈಸೆನ್ಸ್ ರದ್ದು ಮಾಡಬೇಕು ಎಂದು ಅನೇಕರು ಸರ್ಕಾರವನ್ನು ಒತ್ತಾಯಿಸಿದರು.