ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಹಿತ್ಯ ಬರಹದಲ್ಲಿ ಬದುಕಿನ ನೈಜತೆ ಇರಬೇಕು: ಶಾಸಕ ಟಿ.ರಘುಮೂರ್ತಿ

Published : 6 ಸೆಪ್ಟೆಂಬರ್ 2024, 14:04 IST
Last Updated : 6 ಸೆಪ್ಟೆಂಬರ್ 2024, 14:04 IST
ಫಾಲೋ ಮಾಡಿ
Comments

ಚಳ್ಳಕೆರೆ: ಯಾವುದೇ ಸಾಹಿತ್ಯ ಕೃತಿ ಮತ್ತು ಬರಹ ನೈಜತೆಯಿಂದ ಕೂಡಿರರಬೇಕು ಎಂದು ಶಾಸಕ ಟಿ.ರಘುಮೂರ್ತಿ ಸಲಹೆ ನೀಡಿದದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ಮತ್ತು ಚಿತ್ರದುರ್ಗ ಚಿನ್ಮೂಲಾದ್ರಿ ವೇದಿಕೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೊರಲಕುಂಟೆ ತಿಪ್ಪೇಸ್ವಾಮಿ ಅವರ ‘ಬರಹದ ಒಳನೋಟ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವಾಟ್ಸ್‌ಆ್ಯಪ್‌, ಫೇಸ್‍ಬುಕ್ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮನುಕುಲದ ದಿಕ್ಕುಗಳು ಭಿನ್ನವಾಗುತ್ತಿವೆ. ‘ಬರಹದ ಒಳನೋಟ’ ಕೃತಿ  ಮೂಲಕ ಕೊರಲಕುಂಟೆ ತಿಪ್ಪೇಸ್ವಾಮಿ ಅವರು ಗ್ರಾಮೀಣ ಪರಿಸದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟವಟಿಕೆಗಳನ್ನು ದಾಖಲಿಸುವ ಕೆಲಸ ಮಾಡಿದ್ದಾರೆ ಎಂದು ಸಾಹಿತಿ ತಿಪ್ಪಣ್ಣ ಮರಿಕುಂಟೆ, ಹೇಳಿದರು.

ಪ್ರಸ್ತುತ ರಾಜಕೀಯ ಅವ್ಯವಸ್ಥೆ ಮತ್ತು ಬದುಕಿನ ಅಸಮಾನತೆಯ ತಣ್ಣನೆ ಧ್ವನಿ ಸಾಹಿತ್ಯ ಬರಹದಲ್ಲಿ ಅಡಗಿರುತ್ತದೆ ಎಂದು ಬಂಡಾಯ ಸಾಹಿತಿ ಸಿ. ಶಿವಲಿಂಗಪ್ಪ ತಿಳಿಸಿದರು.

ಬರಹಗಾರ ಜಡೇಕುಂಟೆ ಮಂಜುನಾಥ್ ಮಾತನಾಡಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ನಾಟಕ ಅಕಾಡೆಮಿ ಜಿಲ್ಲಾ ಮಾಜಿ ಸಂಚಾಲಕ ಪಿ.ತಿಪ್ಪೇಸ್ವಾಮಿ, ಕವಿ ಕೊರಲಕುಂಟೆ ತಿಪ್ಪೇಸ್ವಾಮಿ, ನಗರಸಭೆ ಅಧ್ಯಕ್ಷೆ ಜೈತುನ್ಬಿ, ಉಪಾಧ್ಯಕ್ಷೆ ಓ.ಸುಜಾತ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇಂದ್ರ, ಮಾಜಿ ಅಧ್ಯಕ್ಷ ರಮೇಶ್‍ಗೌಡ, ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮಣ, ರೈತ ಮುಖಂಡ ಕೆ.ಪಿ.ಭೂತಯ್ಯ, ರೆಡ್ಡಿಹಳ್ಳಿ ವೀರಣ್ಣ, ದಲಿತ ಮುಖಂಡ ಭೀಮನಕೆರೆ ಶಿವಮೂರ್ತಿ, ವಿಜಯಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಬಿ.ಆನಂದಕುಮಾರ್, ಮಂಜುನಾಥ್, ರಂಗಸ್ವಾಮಿ, ಸಬ್ರಿನಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT