ಸಂತೆ ಸ್ಥಳಾಂತರಕ್ಕೆ ಆಗ್ರಹಿಸಿ ಶನಿವಾರ ರೈತಸಂಘ ಮತ್ತು ಹಸಿರುಸೇನೆ ವತಿಯಿಂದ ಪ್ರತಿಭಟನೆ ನಡೆಯಿತು.
ವಾರದ ಸಂತೆ ಸಮಸ್ಯೆ ಗಮನಕ್ಕೆ ಬಂದಿದ್ದು ಸ್ಥಳಾಂತರಕ್ಕೆ ತಕ್ಷಣವೇ ಶಾಸಕ ಎನ್.ವೈ. ಗೋಪಾಲಕೃಷ್ಣ ಜತೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು
ಟಿ. ಜಗದೀಶ್ ತಹಶೀಲ್ದಾರ್ ಮೊಳಕಾಲ್ಮುರು
ಸಾಂಕೇತಿಕ ಸಂತೆ ನಡೆಸಲು ನಿರ್ಧಾರ
ವಾರದ ಸಂತೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ ಜ. 7ರಂದು ಇಲ್ಲಿನ ಶಾಸಕರ ಭವನದ ಎದುರು ವಾರದ ಸಂತೆಯನ್ನು ನಡೆಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು. ಜಿಲ್ಲಾಧಿಕಾರಿ ಮತ್ತು ಶಾಸಕರು ಸಂತೆ ದಿನ ಸಂಜೆ ಸ್ಥಳಕ್ಕೆ ಬಂದು ಸಮಸ್ಯೆ ವೀಕ್ಷಿಸಬೇಕು. ಇಲ್ಲವಾದಲ್ಲಿ ಮುಂದಿನ ಅನಾಹುತಕ್ಕೆ ಅವರನ್ನೇ ಹೊಣೆ ಮಾಡಲಾಗುವುದು ಎಂದು ಶನಿವಾರ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು ಸ್ಥಳ ಪರಿಶೀಲಿಸಿ: ಸಂತೆ ಸ್ಥಳಾಂತರಕ್ಕೆ ಕೋಟೆ ಬಡಾವಣೆಯಲ್ಲಿ ಸ್ಥಳವಿದೆ. ಜತೆಗೆ ರಾಯದುರ್ಗ ರಸ್ತೆಯ ಶಾದಿಮಹಲ್ ಮುಂಭಾಗದಲ್ಲಿ ಪಟ್ಟಣ ಪಂಚಾಯಿತಿಗೆ ಸೇರಿದ ವಿಶಾಲ ಜಾಗವಿದೆ. ಅಲ್ಲಿಗೆ ಸ್ಥಳಾಂತರ ಮಾಡಿ ಮೈದಾನ ಅಭಿವೃದ್ಧಿ ಮಾಡಿದಲ್ಲಿ ಪಟ್ಟಣ ವಿಸ್ತರಣೆಯಾಗಲು ಅನುವು ಆಗಲಿದೆ. ಈ ಬಗ್ಗೆ ಪರಿಶೀಲನೆ ಮಾಡಬಹುದು ಎಂದು ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರು ಮನವಿ ಮಾಡಿದರು.