ಭಾನುವಾರ, ಜೂಲೈ 5, 2020
23 °C

ಮುರುಘಾಮಠ ಪ್ರವೇಶ: ಜೂನ್ 8ರಿಂದ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಕೊರೊನಾ ಹಿನ್ನೆಲೆಯಲ್ಲಿ ಮುರುಘಾಮಠ ಹಾಗೂ ಮುರುಘಾವನಕ್ಕೆ 2 ತಿಂಗಳಿನಿಂದ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಜೂನ್‌ 8ರಿಂದ ಪುನಾ ಅವಕಾಶ ಕಲ್ಪಿಸಲಾಗಿದೆ’ ಎಂದು ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

‘2020ರಲ್ಲಿ ಅನಾರೋಗ್ಯಕರವಾದ ಸಂದರ್ಭವನ್ನು ಎದುರಿಸುತ್ತಿದ್ದೇವೆ. ಅನೇಕ ತಲ್ಲಣಗಳು, ಕಂಡರಿಯದ ದುಸ್ಥಿತಿ, ಅಸಹಾಯಕ ಪರಿಸ್ಥಿತಿ ಉಂಟಾಗಿದೆ. ಕೋವಿಡ್-19 ಪ್ರಕರಣ ಹೆಚ್ಚುತ್ತಿವೆ. ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಿದೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ವಿಷಾದಿಸಿದರು.

‘ಮಾನವ ದನಕರುಗಳಿಗೆ ಮೂಗುದಾರ ಹಾಕಿದಂತೆ ಕೊರೊನಾ ಮಾನವನಿಗೆ ಮೂಗುದಾರ ಹಾಕಿದೆ. ಆದ್ದರಿಂದ ಮಠ, ಮುರುಘಾವನಕ್ಕೆ ಭೇಟಿ ನೀಡುವ ಸಾರ್ವಜನಿಕರು ಅಂತರ ಕಾಪಾಡಿಕೊಳ್ಳಬೇಕು. ಸ್ಯಾನಿಟೈಸರ್ ಬಳಸಿ, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಒಂದೆರೆಡು ದಿನ ನೋಡಿಕೊಂಡು ನಿತ್ಯ ದಾಸೋಹ ಆರಂಭಿಸಲು ತೀರ್ಮಾನಿಲಾಗುವುದು’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು