ಹೊಸದುರ್ಗ: ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ನ.2ರಿಂದ 7ರವರೆಗೆ ನಡೆಯಲಿರುವ ರಾಷ್ಟ್ರೀಯ ನಾಟಕೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ 6 ದಿನಗಳ ಕಾಲ ನಡೆಯಲಿರುವ ನಾಟಕೋತ್ಸವದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಈ ಬಾರಿ ‘ಯುಗದ ಉತ್ಸಾಹವ ನೋಡಿರೆ’ ಎಂಬ ಧ್ಯೇಯ ವಾಕ್ಯದಲ್ಲಿ ನಡೆಯಲಿರುವ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಶಿವಕುಮಾರ ರಂಗಮಂದಿರದಲ್ಲಿ ಒಂದೊಂದು ವಿಷಯ ಕುರಿತು ಚಿಂತನ ಕಾರ್ಯಕ್ರಮವಿರುತ್ತದೆ. ಶಿವಸಂಚಾರದ 3 ನಾಟಕಗಳು ಸೇರಿ ಒಟ್ಟು 6 ನಾಟಕಗಳು ಬಯಲು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿವೆ.

‘1987ರಲ್ಲಿ ಶಿವಕುಮಾರ ಕಲಾಸಂಘ ಆರಂಭವಾಯಿತು. ಆರಂಭದಲ್ಲಿ ಸ್ಥಳೀಯ ಕಲಾವಿದರಿಂದ ನಾಟಕಗಳನ್ನು ಆಡಿಸಲಾಗುತ್ತಿತ್ತು. ಮುಂದೆ ಇದು ಸಿಜಿಕೆ ಅವರಿಂದ ಶಿವಸಂಚಾರ ಎಂದೇ ಪ್ರಖ್ಯಾತಿ ಪಡೆದು, ನಾಡಿನಾದ್ಯಂತ ಪರಿಣಾಮಕಾರಿಯಾಗಿ ಪ್ರದರ್ಶನ ನೀಡಿದೆ. ಮುಂದುವರಿದಂತೆ ಸಾಣೇಹಳ್ಳಿಯಲ್ಲಿ ರಂಗಮಂದಿರಗಳು ಉದಯವಾದವು. ಭಕ್ತರ ಸಹಕಾರದಿಂದ ಒಳಾಂಗಣ ರಂಗಮಂದಿರ, ಬಯಲು ರಂಗಮಂದಿರಗಳು ತಲೆ ಎತ್ತಿದವು. ಎಲ್ಲರ ಸಹಕಾರದಿಂದ ನಾಟಕೋತ್ಸವ ವ್ಯವಸ್ಥಿತವಾಗಿ ನಡೆಯಲು ಕಾರಣವಾಯಿತು’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ನ. 5ರಂದು ಬೆಳಿಗ್ಗೆ 10ಕ್ಕೆ ಎಸ್.ಎಸ್. ಒಳಾಂಗಣ ರಂಗಮಂದಿರದಲ್ಲಿ ‘ಸಾವಯವ ಕೃಷಿ’ ವಿಷಯ ಕುರಿತ ವಿಚಾರ ಸಂಕಿರಣ ನಡೆಯಲಿದೆ. ಅದೇ ದಿನ ರಕ್ತದಾನ ಶಿಬಿರ ನಡೆಯಲಿದೆ. ನಂತರ, ‘ವಿ.ವಿ. ಸಾಗರದ ನೀರು ವ್ಯರ್ಥವಾಗುವುದನ್ನು ತಪ್ಪಿಸಿ, ಇದರ ಸದ್ಬಳಕೆ ಮಾಡಿ’ ವಿಷಯ ಕುರಿತು ಚಿಂತನಾ ಕಾರ್ಯಕ್ರಮ ನಡೆಯಲಿದೆ.

ಇಷ್ಟಲಿಂಗ ದೀಕ್ಷೆ:

ಈ ಬಾರಿ ನಾಟಕೋತ್ಸವದಲ್ಲಿ ಪ್ರತಿದಿನ ಬೆಳಿಗ್ಗೆ 6.30ಕ್ಕೆ ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಬಾಲ್ಯದಲ್ಲಿಯೇ ಮಕ್ಕಳಲ್ಲಿ ಸಂಸ್ಕಾರ ಕಲಿಸಿದರೆ, ಬದುಕಿನಲ್ಲಿ ಎದುರಾಗುವ ಟೀಕೆ– ಟಿಪ್ಪಣಿಗಳನ್ನು ಎದುರಿಸುವ ಶಕ್ತಿ ಬರುತ್ತದೆ ಎಂಬ ಉದ್ದೇಶದಿಂದ ದೀಕ್ಷೆ ನೀಡುವ ಕಾರ್ಯಕ್ರಮ ಆಯೋಜಿಸಲಾಗಿದೆ.

ನ. 7ರಂದು ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುವರು. ರಂಗ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರಿಗೆ ಕೊಡಮಾಡುವ ‘ಶ್ರೀ ಶಿವಕುಮಾರ ಪ್ರಶಸ್ತಿ’ಯನ್ನು ಚಲನಚಿತ್ರ, ರಂಗಭೂಮಿ ಕಲಾವಿದೆ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಅವರಿಗೆ ಪ್ರದಾನ ಮಾಡಲಾಗುವುದು. 2004ರಿಂದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿಯು ₹ 50,000 ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

ಈ ನಾಟಕ ಪ್ರದರ್ಶನ:

ನ. 2ರಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚನೆಯ ‘ಜಂಗಮದೆಡೆ’, ನ. 3ರಂದು ರವಿಕಿರಣ್ ಆರ್. ಬೆಳ್ಳಗೆರೆ ರಚನೆಯ ‘ಆಳಿದ ಮಾಸ್ವಾಮಿಗಳು’, ನ. 4ರಂದು ಕೃಷ್ಣಮೂರ್ತಿ ಮೂಡಬಾಗಿಲು ರಚನೆಯ ‘ಕಳ್ಳರ ಸಂತೆ’, ನ. 5ರಂದು ಹಂಪನಾ ರಚನೆಯ ‘ಚಾರು ವಸಂತ’, ನ. 6ರಂದು ಡಿ. ವಿಜಯ ಭಾಸ್ಕರ್ ರಚನೆಯ ‘ಗಾಂಧಿ ಜಯಂತಿ’, ನ. 7ರಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚನೆಯ ‘ಶಿವಯೋಗಿ ಸಿದ್ಧರಾಮೇಶ್ವರ’ ನಾಟಕಗಳು ಪ್ರತಿದಿನ ರಾತ್ರಿ 9 ಗಂಟೆಗೆ ಬಯಲು ರಂಗಮಂದಿರದಲ್ಲಿ ನಡೆಯಲಿದೆ.

‘ಎಲ್ಲ ಜಾತಿಯವರಲ್ಲೂ ಜಾಗೃತಿ’

ಸಾಣೇಹಳ್ಳಿಯಲ್ಲಿ ನಡೆಯುವ ನಾಟಕೋತ್ಸವ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಪಂಡಿತಾರಾಧ್ಯ ಶ್ರೀಗಳು ರಂಗೋತ್ಸವದ ಮೂಲಕ ಸಮಾಜದಲ್ಲಿ ಬದಲಾವಣೆ ತರುತ್ತಿದ್ದಾರೆ. ಪ್ರತಿಭೆಯನ್ನು ಗುರುತಿಸಿ ತರಬೇತಿ ಕೊಟ್ಟು ಅವರ ಜೀವನ ರೂಪಿಸಲು ಶ್ರಮಿಸುತ್ತಿದ್ದಾರೆ. ಬಸವ ಸಂಸ್ಕೃತಿ ಅಭಿಯಾನ ನಾಟಕೋತ್ಸವ ಸೇರಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಎಲ್ಲ ಜಾತಿಯವರಲ್ಲೂ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಸಮಾಜದ ಅಭಿವೃದ್ಧಿಗೆ ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾರೆ. – ಅಣಬೇರು ರಾಜಣ್ಣ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.