ನಾಯಕನಹಟ್ಟಿ: ಬೀದಿಬದಿ ವ್ಯಾಪಾರಸ್ಥರಿಗೆ ₹10 ಲಕ್ಷ ವ್ಯಾಪಾರ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಸಂಘದ ನಿರ್ದೇಶಕ ಡಿ.ಜಿ.ಗೋವಿಂದಪ್ಪ ಹೇಳಿದರು.
ಪಟ್ಟಣದಲ್ಲಿ ಈಚೆಗೆ ನಡೆದ ಗುರುತಿಪ್ಪೇರುದ್ರಸ್ವಾಮಿ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತಾನಾಡಿದರು.
ದುಡಿಯುವ, ಕೂಲಿ ಕಾರ್ಮಿಕರ ಆರ್ಥಿಕ ಸ್ವಾವಲಂಬನೆಯ ಉದ್ದೇಶದಿಂದ 2010-11ರಲ್ಲಿ ಸಹಕಾರ ಸಂಘವನ್ನು ಸ್ಥಾಪಿಸಲಾಯಿತು. ಸಂಘದಲ್ಲಿ 499 ಸದಸ್ಯರಿದ್ದು, 50 ಸಹ ಸದಸ್ಯರಿದ್ದಾರೆ. ವಾರ್ಷಿಕ ಅಂದಾಜು ₹3 ಕೋಟಿ ಆರ್ಥಿಕ ವ್ಯವಹಾರ ನಡೆಸುತ್ತಿದೆ ಎಂದರು.