ಬುಧವಾರ, ಜನವರಿ 22, 2020
23 °C

‘ತರಳಬಾಳು ಹುಣ್ಣಿಮೆ’ ಮಹೋತ್ಸವ ಫೆಬ್ರುವರಿ 1ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿರಿಗೆರೆ: ಕಲ್ಯಾಣದ ಆಶಯವನ್ನು ಹೊತ್ತ, ಶರಣರ ತತ್ವ ವಿಚಾರಗಳ ಮಂಥನದ ಭಾವೈಕ್ಯದ ‘ತರಳಬಾಳು ಹುಣ್ಣಿಮೆ’ ಈ ಬಾರಿ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೆಬೀಡಿನಲ್ಲಿ ನಡೆಯಲಿದೆ.

ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ 2020ರ ಫೆಬ್ರುವರಿ 1ರಿಂದ 9ರ ವರೆಗೆ ಮಹೋತ್ಸವ ನಡೆಯಲಿದೆ.

ಮಹೋತ್ಸವದ ಅಂಗವಾಗಿ ಕೆರೆ ಪಾದಯಾತ್ರೆ, ರೈತರ ಸಮಸ್ಯೆ, ಸಾಹಿತ್ಯ, ಆರೋಗ್ಯ ಕುರಿತು ಪ್ರತಿದಿನ ಉಪನ್ಯಾಸಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.  ಮಹೋತ್ಸವ ಸಮಿತಿ ಕಚೇರಿ ಯನ್ನು ಹಳೆಬೀಡಿನ ಬಸವೇಶ್ವರ ವೃತ್ತ, ಜಾವಗಲ್ ರಸ್ತೆಯಲ್ಲಿ ಆರಂಭಿಸಲಾಗಿದೆ.

2019ರಲ್ಲಿ ಹಳೆಬೀಡು ಭಾಗದಲ್ಲಿ ಭೀಕರ ಬರ ಕಾಣಿಸಿ ಕೊಂಡಿದ್ದ ಕಾರಣ ಅಲ್ಲಿ ನಡೆ ಯಬೇಕಾಗಿದ್ದ ಉತ್ಸವವನ್ನು ಸಿರಿಗೆರೆಯಲ್ಲಿ ಸಾಂಕೇತಿಕವಾಗಿ ಆಚರಿಸಲಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು