ನಾಯಕನಹಟ್ಟಿ ಹೋಬಳಿಯ ಕುದಾಪುರ ಗ್ರಾಮದ ಬೋರೆದೇವರ ದೇವಾಲಯದಲ್ಲಿ ಹಿರಿಯೂರು ತಾಲ್ಲೂಕಿನ ಗ್ರಾಮವೊಂದರ ಯುವಕನು ಚಿತ್ರದುರ್ಗ ತಾಲ್ಲೂಕಿನ ಗ್ರಾಮವೊಂದರ ಬಾಲಕಿಯನ್ನು 2023ರ ಏಪ್ರಿಲ್ 23ರಂದು ವಿವಾಹವಾಗಿದ್ದನು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರು ಈಚೆಗೆ ಕೈಗೊಂಡಿದ್ದ ಮನೆ ಮನೆ ಭೇಟಿ ವೇಳೆ ಘಟನೆಯು ಬೆಳಕಿಗೆ ಬಂದಿತ್ತು. ಈ ಕುರಿತು ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಅಧಿಕಾರಿ ಅವರಿಗೆ ವರದಿ ನೀಡಿದ್ದರು.