ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಬವ್ವ ಜಯಂತಿ: ಸರಳ ಆಚರಣೆ

ಜಯಂತ್ಯುತ್ಸವದಲ್ಲಿ ಬಸವನಾಗಿದೇವ ಸ್ವಾಮೀಜಿ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭಾಗಿ
Last Updated 12 ನವೆಂಬರ್ 2020, 5:48 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋಟೆನಗರಿಯ ಜನಮಾನಸದಲ್ಲಿ ವೀರವನಿತೆಯಾಗಿ ನೆಲೆಯೂರಿರುವ ಒನಕೆ ಓಬವ್ವ ಜಯಂತ್ಯುತ್ಸವವನ್ನು ಕೋವಿಡ್ ಕಾರಣಕ್ಕೆ ಬುಧವಾರ ಸರಳವಾಗಿ ಆಚರಿಸಲಾಯಿತು.

ವೀರವನಿತೆ ಓಬವ್ವ ಜಯಂತಿ ಸ್ಮಾರಕ ಸಂರಕ್ಷಣಾ ಸಮಿತಿ ಆಯೋಜಿಸಿದ್ದ ಜಯಂತ್ಯುತ್ಸವದಲ್ಲಿ ಓಬವ್ವ ಪ್ರತಿಮೆಗೆ ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ಇದಕ್ಕೂ ಮುನ್ನ ಕೋಟೆಯೊಳಗಿನ ಓಬವ್ವ ಸಮಾಧಿಗೆ ಸ್ವಾಮೀಜಿ ಪೂಜೆ ಸಲ್ಲಿಸಿದರು.

ಜಯಂತ್ಯುತ್ಸವದ ಅಂಗವಾಗಿ ಅಭಿಮಾನಿಗಳು ಮದಕರಿನಾಯಕ, ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೂ ಪುಷ್ಪನಮನ ಸಲ್ಲಿಸಿದರು.

ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಉಪಾಧ್ಯಕ್ಷೆ ಶ್ವೇತಾ ವೀರೇಶ್, ಮಾಜಿ ಅಧ್ಯಕ್ಷ ಎಚ್.ನಿರಂಜನಮೂರ್ತಿ, ಗೋವರ್ಧನ, ತಿಪ್ಪೇಸ್ವಾಮಿ, ರೇಖಾ, ಮಂಜುಳಮ್ಮ, ರತ್ನಮ್ಮ, ಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT