ಕಾಡುಗೊಲ್ಲ ಮಹಿಳೆಯರು ಮುಟ್ಟಾದ ಮೊದಲ ಮೂರು ದಿನ ಗ್ರಾಮದ ಹೊರವಲಯದಲ್ಲಿ ಮರದ ಕೆಳಗೆ ಅಥವಾ ರಸ್ತೆಬದಿಯಲ್ಲಿ ನೆಲೆಸಬೇಕೆಂಬ ಅಲಿಖಿತ ಅಂಧಾಚರಣೆ ಚಿತ್ರದುರ್ಗ ಜಿಲ್ಲೆಯ ಚಿತ್ತಯ್ಯನಹಟ್ಟಿಯ ಕಾಡುಗೊಲ್ಲ ಸಮುದಾಯದಲ್ಲಿ ಚಾಲ್ತಿಯಲ್ಲಿತ್ತು. ದೇವರು ಮತ್ತು ಪಿತೃಪ್ರಭುತ್ವ ಕುರಿತಾದ ಆಳವಾದ ಭಯ ಇದಕ್ಕೆ ಕಾರಣ. ‘ಚಿಕ್ಕಮ್ಮ ಮೃತಪಟ್ಟಾಗ ಈ ಸಂಪ್ರದಾಯದ ವಿರುದ್ಧ ಧ್ವನಿ ಎತ್ತಲು ನಾನು ತುಂಬಾ ಚಿಕ್ಕವಳು. ಆದರೆ ಈ ಅನಿಷ್ಟ ಆಚರಣೆಯನ್ನು ಪಾಲನೆ ಮಾಡಬಾರದೆಂದು ಅಂದೇ ನಿರ್ಧರಿಸಿದೆ’ ಎನ್ನುತ್ತಾ, ಈ ಮೌಢ್ಯದ ವಿರುದ್ಧ ಹೋರಾಡಿ ಗೆದ್ದವರು ಜಿ.ಕೆ. ಪ್ರೇಮಾ. ಅವರ ಹೋರಾಟದ ಸ್ಫೂರ್ತಿದಾಯಕ ಕಥನ ಈ ವಿಡಿಯೊದಲ್ಲಿ.