ಹೊಳಲ್ಕೆರೆ: ‘18 ವರ್ಷ ಪೂರೈಸದ ಮಗಳನ್ನು ಫುಸಲಾಯಿಸಿ, ಅಂತರ್ಜಾತಿ ವಿವಾಹ ಆಗಿರುವ ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಿಲ್ಲ’ ಎಂದು ಆರೋಪಿಸಿದ ಭಾನುವಾರ ಪಟ್ಟಣ ಪೊಲೀಸ್ ಠಾಣೆ ಎದುರೇ ವಿಷ ಸೇವಿಸಿದ್ದ ಹುಡುಗಿಯ ತಂದೆ ಸೋಮವಾರ ಮೃತಪಟ್ಟಿದ್ದಾರೆ.

ಗಿಲಿಕೇನಹಳ್ಳಿ ಗ್ರಾಮದ ಅಜ್ಜಯ್ಯ (40) ಮೃತ ವ್ಯಕ್ತಿ. ಮಗಳು ಕಾಣೆಯಾಗಿರುವ ಬಗ್ಗೆ ಅಜ್ಜಯ್ಯ ಅವರು ಜುಲೈ 13ರಂದು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

‘ಮಗಳಿಗೆ 18 ವರ್ಷ ತುಂಬಿಲ್ಲ. ಅವಳನ್ನು ಕರೆದೊಯ್ದಿದ್ದ ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದರು. ದೂರು ದಾಖಲಿಸಲು ವಿಳಂಬ ಮಾಡಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಅಜ್ಜಯ್ಯ ವಿಷ ಸೇವಿಸಿದ್ದರು.

ಅಜ್ಜಯ್ಯ ಅವರ ಸಾವಿನಿಂದ ಆಕ್ರೋಶಗೊಂಡ ಗ್ರಾಮಸ್ಥರು ಠಾಣೆಯ ಮುಂದೆ ಶವ ಇಟ್ಟು ಪ್ರತಿಭಟಿಸಿದ್ದು, ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ನಂತರ ಮುಖ್ಯವೃತ್ತದಲ್ಲಿ ಶವ ಇಟ್ಟು ಪ್ರತಿಭಟನೆ ನಡೆಸಿದರು. ಸಂಚಾರ ದಟ್ಟಣೆ ಉಂಟಾಗುತ್ತಿದ್ದಂತೆಯೇ ಪೊಲೀಸಲು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿ ಶವವನ್ನು ಆಂಬುಲೆನ್ಸ್ಗೆ ಇಟ್ಟು ಕಳುಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.