ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಎನ್‌ಇಪಿ ರದ್ದತಿ ವಿರೋಧಿಸಿ ಎಬಿವಿಪಿ ಪ್ರತಿಭಟನೆ

Published 31 ಆಗಸ್ಟ್ 2023, 15:38 IST
Last Updated 31 ಆಗಸ್ಟ್ 2023, 15:38 IST
ಅಕ್ಷರ ಗಾತ್ರ

ಹಿರಿಯೂರು: ಎನ್‌ಇಪಿ ರದ್ದತಿ ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿವಿಧ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.

ಪ್ರಸ್ತುತ ಜಾರಿಯಲ್ಲಿರುವ ಶಿಕ್ಷಣ ವ್ಯವಸ್ಥೆಯ ಸಾಧಕ–ಬಾಧಕಗಳ ಕುರಿತು ಚರ್ಚಿಸದೆ ರಾಜಕೀಯ ಸೇಡು ತೀರಿಸಿಕೊಳ್ಳಲು ಶಿಕ್ಷಣ ಕ್ಷೇತ್ರವನ್ನು ಅಸ್ತ್ರವಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ವಿದ್ಯಾರ್ಥಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಎಬಿವಿಪಿ ತಾಲ್ಲೂಕು ಸಂಚಾಲಕ ಮಂಜೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಸುದರ್ಶನ್, ತಾಲ್ಲೂಕು ಸಹ ಸಂಚಾಲಕ ಧನುಷ್, ನಗರ ಕಾರ್ಯದರ್ಶಿ ಸುದೀಪ್, ಸಹಕಾರ್ಯದರ್ಶಿ ರಾಮು, ವಿದ್ಯಾರ್ಥಿ ಪ್ರಮುಖ್ ರಮೇಶ್, ಜಿಲ್ಲಾ ಸಹ ಸಂಚಾಲಕ ನಾಗೇಶ್, ಚಿರ್ತದುರ್ಗ ತಾಲ್ಲೂಕು ಸಂಚಾಲಕ ಕನಕರಾಜ್, ವಿವೇಕ್, ಬಾಲಾಜಿ, ವಿಕ್ರಮ್, ತಿಪ್ಪೇಶ್, ಅಜಯ್, ಮಧು, ಶ್ರೀನಿವಾಸ್, ಕಿರಣ್, ಹರ್ಷವರ್ಧನ್, ಮಾರುತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT