ಹಿರಿಯೂರು: ತಾಲ್ಲೂಕಿನ ಐಮಂಗಲ ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಸೋಮವಾರ ಹೋಬಳಿ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಗ್ರಾಮದ ಕಲ್ಕುಂಟೆ ಕರಿಯಮ್ಮ ದೇವಸ್ಥಾನದ ಆವರಣದಲ್ಲಿ ಸೇರಿದ್ದ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಭದ್ರಾ ಮೇಲ್ಕಂಡೆ ಯೋಜಯಡಿಲ್ಲಿ 29.9 ಟಿ.ಎಂ.ಸಿ. ಅಡಿ ನೀರು ಬಳಸಿಕೊಂಡು ಚಿತ್ರದುರ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳ ಕೆರೆಗಳಿಗೆ ಸೂಕ್ಷ್ಮ ನೀರಾವರಿ ಪದ್ಧತಿ ಮೂಲಕ ನೀರು ತುಂಬಿಸಬೇಕು. 2007–08 ರಲ್ಲಿ ಆರಂಭವಾದ ಭದ್ರಾ ಮೇಲ್ದಂಡೆ ಯೋಜನೆ 17 ವರ್ಷ ಕಳೆದರೂ ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಆಡಳಿತ ನಡೆಸಿದವರ ಇಚ್ಛಾಶಕ್ತಿಯ ಕೊರತೆ ಇದಕ್ಕೆ ಕಾರಣ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ದೂಷಿಸುವ ಮೂಲಕ ಕಾಲಹರಣ ಮಾಡಿದಲ್ಲಿ ರೈತರು ಸರ್ವನಾಶವಾಗುತ್ತಾರೆ’ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

‘ತುಂಗಾ ನದಿಯಿಂದ ಭದ್ರಾ ನದಿಗೆ ನೀರು ಹರಿಸುವ ಕಾಮಗಾರಿ ಶೇ 80ರಷ್ಟು ಪೂರ್ಣಗೊಂಡಿದೆ ಎನ್ನಲಾಗಿದ್ದು, ಬಾಕಿ ಇರುವ ಕಾಮಗಾರಿ ಮುಗಿಸಲು ಇವರಿಗೆ ಎಷ್ಟು ವರ್ಷ ಬೇಕು? ಎಂದು ರೈತರು, ಅಜ್ಜಂಪುರ ಸಮೀಪದಿಂದ ಆರಂಭವಾಗುವ ವೈ ಜಂಕ್ಷನ್ನಲ್ಲಿ ಎರಡು ಕವಲಾಗುವ ಚಿತ್ರದುರ್ಗ ಮತ್ತು ತುಮಕೂರು ಶಾಖಾ ಕಾಲುವೆಗಳಲ್ಲಿ ಚಿತ್ರದುರ್ಗ ಶಾಖಾ ಕಾಲುವೆ ಬಹುತೇಕ ಪೂರ್ಣಗೊಂಡಿದ್ದು, ಐಮಂಗಲ ಹೋಬಳಿಗೆ ಸೇರಿದ ಯಾವುದೇ ಶಾಖಾ ಕಾಲುವೆಗಳು ಇನ್ನೂ ಆರಂಭವಾಗದಿರುವುದು ಬೇಸರದ ಸಂಗತಿ’ ಎಂದು ಹೇಳಿದರು.

ತಹಶೀಲ್ದಾರ್ ಸಿ.ರಾಜೇಶ್ ಕುಮಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಹಿಂದಿನ 50 ವರ್ಷಗಳಲ್ಲಿ ಹೋಬಳಿಯ ಕೆರೆಗಳು ತುಂಬಿದ್ದೇ ಅಪರೂಪ. 40 ವರ್ಷದ ಹಿಂದೆ ಐಮಂಗಲ ಕೆರೆಯ ಹಿಂದೆ ನಳನಳಿಸುತ್ತಿದ್ದ ಅಡಿಕೆ–ತೆಂಗು, ವೀಳ್ಯೆದೆಲೆಯ ತೋಟಗಳು ಒಣಗಿ ಮುಳ್ಳುಕಂಟಿ ಬೆಳೆದಿದೆ. ಮಳೆ ಪ್ರಮಾಣ ಕ್ಷೀಣಿಸುತ್ತಿರುವುದರಿಂದ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಪ್ರಯುಕ್ತ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಕ್ಷಿಪ್ರ ಗತಿಯಲ್ಲಿ ನಡೆಸಬೇಕು ಎಂದು ಮುಖಂಡರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ಎನ್.ತಿಪ್ಪೀರಯ್ಯ, ಉಪಾಧ್ಯಕ್ಷ ಎಚ್.ಜೆ.ಕಾಂತರಾಜ್, ಖಜಾಂಚಿ ಜಿ.ಡಿ.ರಾಮಮೋಹನ್, ಜಿ.ಪಿ. ಯಶವಂತರಾಜ್, ಟಿ. ಕೃಷ್ಣಮೂರ್ತಿ,ಕೆ.ಟಿ. ತಿಪ್ಪೇಸ್ವಾಮಿ, ಎಚ್. ಹನುಮಂತರೆಡ್ಡಿ, ಎನ್.ಸಿದ್ದಪ್ಪ, ಟಿ.ಹನುಮನಾಯಕ, ಸಿ.ತಿಪ್ಪೇಸ್ವಾಮಿ, ಓ.ಜಿ.ಬಸಣ್ಣ, ಟಿ.ಆರ್.ರಾಜೇಶ್ವರಿ, ಮುಖಂಡರಾದ ಶಶಿಕಲಾಸುರೇಶ್ ಬಾಬು, ಕಂದಿಕೆರೆ ಸುರೇಶ್ಬಾಬು, ಗಿಡ್ಡೋಬನಹಳ್ಳಿ ಅಶೋಕ್, ಕಲ್ಲಹಟ್ಟಿ ಆರ್.ಹರೀಶ್, ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಚಂದ್ರಪ್ಪ ಪಾಲ್ಗೊಂಡಿದ್ದರು.

ಶೀಘ್ರವೇ ಟೆಂಡರ್:

‘ಐಮಂಗಲ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಅನುಮೋದನೆ ದೊರೆತಿದ್ದು ಟೆಂಡರ್ ಕರೆಯಲಾಗುತ್ತಿದೆ. ಶೀಘ್ರವಾಗಿ ಕಾಮಗಾರಿಗೆ ಚಾಲನೆ ನೀಡಲಾಗುವುದು’ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಕಾರ್ಯಪಾಲಕ ಎಂಜಿನಿಯರ್ ಚಂದ್ರಪ್ಪ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.