ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ, ತಾ.ಪಂ ಚುನಾವಣೆಗೆ ಸಿದ್ಧತೆ: ಮೀಸಲು ನಿಗದಿ

ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ
Last Updated 3 ಮೇ 2021, 2:52 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧತೆ ನಡೆಸಿರುವ ಆಯೋಗ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಪ್ರಕಟಿಸಿದೆ. ಅರ್ಧದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ಕೋವಿಡ್‌ ಕಾರಣಕ್ಕೆ ಚುನಾವಣೆಯನ್ನು ಮುಂದೂಡಲು ಸರ್ಕಾರ ಆಯೋಗಕ್ಕೆ ಶಿಫಾರಸು ಮಾಡಿತ್ತು. ಆರು ತಿಂಗಳ ಬಳಿಕ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಕ್ಷೇತ್ರ ಪುನರ್‌ ವಿಂಗಡಣೆ ಮಾಡಿದ ಪರಿಣಾಮವಾಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ 37ರಿಂದ 41ಕ್ಕೆ ಏರಿಕೆಯಾಗಿವೆ. ಇದರಲ್ಲಿ ಶೇ 50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು. ಹೀಗಾಗಿ, 21 ಸ್ಥಾನ ದೊರೆತಿವೆ.

41 ಸ್ಥಾನಗಳಲ್ಲಿ ಸಾಮಾನ್ಯ ವರ್ಗಕ್ಕೆ 21 ಸ್ಥಾನಗಳಿದ್ದು, ಇದರಲ್ಲಿ 11 ಮಹಿಳೆಗೆ ಮೀಸಲಿಡಬೇಕು. ಪರಿಶಿಷ್ಟ ಜಾತಿಗೆ 10 ಹಾಗೂ ಇದರಲ್ಲಿ ಐದು ಸ್ಥಾನಗಳನ್ನು ಇದೇ ಸಮುದಾಯದ ಮಹಿಳೆಗೆ ಮೀಸಲಿಡುವಂತೆ ಆಯೋಗ ಸೂಚಿಸಿದೆ. ಪರಿಶಿಷ್ಟ ಪಂಗಡಕ್ಕೆ 8 ಸ್ಥಾನ ನಿಗದಿ ಮಾಡಿದ್ದು, ಇದರಲ್ಲಿ 4 ಸ್ಥಾನಗಳು ಮಹಿಳೆಯರಿಗೆ ದೊರೆತಿವೆ. ಪ್ರವರ್ಗ ‘ಎ’ಗೆ 2 ಸ್ಥಾನ ಸಿಕ್ಕಿವೆ. ಕ್ಷೇತ್ರವಾರು ಮೀಸಲಾತಿ ಹಂಚಿಕೆ ಮಾಡಲು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಆಯೋಗ ಸೂಚಿಸಿದೆ.

ಚಿತ್ರದುರ್ಗ ತಾಲ್ಲೂಕು: ತಾಲ್ಲೂಕಿನ 23 ಸ್ಥಾನಗಳ ಪೈಕಿ 12 ಮಹಿಳೆಯರಿಗೆ ನಿಗದಿಯಾಗಿವೆ. ಸಾಮಾನ್ಯ ವರ್ಗಕ್ಕೆ 12, ಪರಿಶಿಷ್ಟ ಜಾತಿಗೆ 6 ಹಾಗೂ ಪರಿಶಿಷ್ಟ ಪಂಗಡಕ್ಕೆ 5 ಸ್ಥಾನ ನಿಗದಿ ಮಾಡಲಾಗಿದೆ.

ಹಿರಿಯೂರು ತಾಲ್ಲೂಕು: 19 ಸ್ಥಾನಗಳಲ್ಲಿ 10 ಮಹಿಳೆಯರಿಗೆ ಮೀಸಲಾಗಿವೆ. ಸಾಮಾನ್ಯ ವರ್ಗಕ್ಕೆ 10, ‍ಪರಿಶಿಷ್ಟ ಜಾತಿಗೆ 5, ‍ಪರಿಶಿಷ್ಟ ಪಂಗಡಕ್ಕೆ 2, ಪ್ರವರ್ಗ ‘ಎ’ 2 ಸ್ಥಾನಗಳನ್ನು ಮೀಸಲಿಡಲಾಗಿದೆ.

ಹೊಸದುರ್ಗ ತಾಲ್ಲೂಕು: 17 ಸ್ಥಾನಗಳಲ್ಲಿ 9 ಮಹಿಳೆಯರಿಗೆ ಮೀಸಲಾಗಿವೆ. ಸಾಮಾನ್ಯ ವರ್ಗಕ್ಕೆ 9, ಪರಿಶಿಷ್ಟ ಜಾತಿಗೆ 4, ‍‍ಪರಿಶಿಷ್ಟ ಪಂಗಡಕ್ಕೆ 1, ಪ್ರವರ್ಗ ‘ಎ’ಗೆ 2 ಹಾಗೂ ಪ್ರವರ್ಗ ‘ಬಿ’ 1 ಸ್ಥಾನ ಇವೆ.

ಹೊಳಲ್ಕೆರೆ ತಾಲ್ಲೂಕು: 15 ಸ್ಥಾನಗಳಲ್ಲಿ 8 ಮಹಿಳೆಯರಿಗೆ ಮೀಸಲಾಗಿವೆ. 8 ಸಾಮಾನ್ಯ ವರ್ಗಕ್ಕೆ, ಪರಿಶಿಷ್ಟ ಜಾತಿಗೆ 4, ಪರಿಶಿಷ್ಟ ಪಂಗಡಕ್ಕೆ 2, ಪ್ರವರ್ಗ ‘ಎ’ 1 ನಿಗದಿಯಾಗಿವೆ.

ಚಳ್ಳಕೆರೆ ತಾಲ್ಲೂಕು: 24 ಸ್ಥಾನಗಳಲ್ಲಿ 12 ಮಹಿಳೆಗೆ, ಸಾಮಾನ್ಯಕ್ಕೆ 11, ಪರಿಶಿಷ್ಟ ಜಾತಿಗೆ 6, ಪರಿಶಿಷ್ಟ ಪಂಗಡಕ್ಕೆ 7, ಸಾಮಾನ್ಯಕ್ಕೆ 11 ಸ್ಥಾನಗಳು ನಿಗದಿಯಾಗಿವೆ.

ಮೊಳಕಾಲ್ಮುರು ತಾಲ್ಲೂಕು: 11 ಸ್ಥಾನಗಳಲ್ಲಿ ಮಹಿಳೆಗೆ 6 ಸ್ಥಾನ, ಸಾಮಾನ್ಯ ವರ್ಗಕ್ಕೆ 5, ಪರಿಶಿಷ್ಟ ಜಾತಿಗೆ 2, ಪರಿಶಿಷ್ಟ ಪಂಗಡಕ್ಕೆ 4 ಸ್ಥಾನಗಳು ನಿಗದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT