ಬಬ್ಬೂರಿನ ವೇಮನರೆಡ್ಡಿ ಅವರ ಮಗ ಬಿ.ವಿ. ತಿಪ್ಪೇಸ್ವಾಮಿ (28) ಮೃತಪಟ್ಟವರು. ಗೆಳೆಯರೊಂದಿಗೆ ಜನ್ಮದಿನ ಆಚರಿಸಿಕೊಂಡು ಮನೆಗೆ ಒಬ್ಬರೇ ಹಿಂದಿರುಗುವಾಗ ಜಲಜೀವನ್ ಮಿಷನ್ ಯೋಜನೆಯಡಿ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲು ತೋಡಿದ್ದ ಗುಂಡಿಯ ಮಣ್ಣಿನ ರಾಶಿಯ ಮೇಲೆ ಬೈಕ್ ಹತ್ತಿ ಉರುಳಿದ್ದರಿಂದ, ತಲೆಗೆ ತೀವ್ರ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.