ಚಿತ್ರದುರ್ಗ: ‘ನಾಡು-ನುಡಿಗಾಗಿ ಪ್ರಾಣವನ್ನೇ ತ್ಯಾಗ ಮಾಡಿದ ರಾಯಣ್ಣ ಭಾರತದ ಶ್ರೇಷ್ಠ ದೇಶಭಕ್ತ. ಇಂತಹ ಸ್ವಾತಂತ್ರ್ಯ ಹೋರಾಟಗಾರನಿಗೆ ರಾಷ್ಟ್ರಮಟ್ಟದಲ್ಲಿ ಗೌರವ ಸಲ್ಲಬೇಕಿದೆ’ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇನೆ ಮಹಿಳಾ ಘಟಕದ ಜಿಲ್ಲಾ ಘಟಕದ ಅಧ್ಯಕ್ಷೆ ವಿ.ಕವಿತಾ ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಸೋಮವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇನೆ ಹಾಗೂ ಪ್ರಜಾಕಲ್ಯಾಣ ಸಮಿತಿಯ ‘ದೇಶಭಕ್ತಿ– ಗಾನಸಂಗಮ’ ಕಾರ್ಯಕ್ರಮದ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

‘ಈಚೆಗೆ ಜನರಲ್ಲಿ ದೇಶಭಕ್ತಿ ಕ್ಷೀಣಿಸುತ್ತಿದೆ. ಈ ಕಾರಣಕ್ಕೆ ರಾಯಣ್ಣನ ಕುರಿತು ಸಾಹಿತಿ ರಾಘವೇಂದ್ರ ರಚಿಸಿರುವ ಗೀತೆ ಯುವಪೀಳಿಗೆಯಲ್ಲಿ ದೇಶಭಕ್ತಿ ಮರು ಬಿತ್ತುವ ಕೆಲಸ ಮಾಡಲಿದೆ. ಇದರ ಧ್ವನಿಸುರಳಿ ಬಿಡುಗಡೆ ಹಾಗೂ ದೇಶಭಕ್ತಿ– ಗಾನಸಂಗಮ ಕಾರ್ಯಕ್ರಮ ಜ.24, 25ರಂದು ನಗರದ ವಾಲ್ಮೀಕಿ ಭವನದಲ್ಲಿ ಆಯೋಜಿಸಲಾಗಿದೆ’ ಎಂದರು.

‘ಬ್ರಿಟಿಷರು ದೇಶದ ಮೇಲೆ ದಾಳಿ ನಡೆಸಿ, ಸಂಪನ್ಮೂಲ ಲೂಟಿ ಜೊತೆಗೆ ರಾಜರುಗಳ ಮೇಲೆ ದಬ್ಬಾಳಿಕೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಕೊಲ್ಲುವುದು, ಜೈಲಿಗೆ ಹಾಕುವುದು ದುಷ್ಕೃತ್ಯ ವಿರುದ್ಧ ಲಕ್ಷಾಂತರ ಮಂದಿ ಚಳವಳಿ ನಡೆಸಿ ಪ್ರಾಣತ್ಯಾಗ ಮಾಡಿದ್ದಾರೆ’ ಎಂದರು.

‘ರಾಯಣ್ಣ ಸ್ಮರಣಾರ್ಥ ರಾಜ್ಯಮಟ್ಟದ ಗಾನಸಂಗಮ ಕಾರ್ಯಕ್ರಮ ಆಯೋಜಿಸಿದ್ದು, ಹೊರ ಜಿಲ್ಲೆಗಳಿಂದ ಬರುವ ಗಾಯಕರಿಗೆ ವಸತಿ, ಊಟದ ವ್ಯವಸ್ಥೆ ಮಾಡಲಾಗುವುದು. ಜ.25ರ ಸಂಜೆ 6ಕ್ಕೆ ರಾಯಣ್ಣನ ಕುರಿತ ದೇಶಭಕ್ತಿ ಗೀತೆಯ ಧ್ವನಿಸುರಳಿ ಬಿಡುಗಡೆ ಮಾಡಲಾಗುವುದು’ ಎಂದು ಸಂಗೊಳ್ಳಿ ರಾಯಣ್ಣ ಸೇನೆಯ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷ ಟಿ.ಆನಂದ್ ವಿವರಿಸಿದರು.

‘ನಟ ಆದಿತ್ಯ ಶಶಿಕುಮಾರ್ ಸೇರಿದಂತೆ ಅನೇಕ ನಟರು, ನಿರ್ದೇಶಕರು, ನಿರ್ಮಾಪಕರು, ಗಣ್ಯರು, ಸಂಗೀತ ವಿದ್ಯಾನ್ಗಳು ಪಾಲ್ಗೊಳ್ಳಲಿದ್ದಾರೆ. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಯಲುಸೀಮೆ ಗಾಯಕರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

‘ಗಾಯನ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ಕ್ರಮವಾಗಿ ₹25,000, ₹10,000 ಹಾಗೂ ₹5,000 ನಗದು ಹಾಗೂ ಆಕರ್ಷಕ ಪಾರಿತೋಷಕ ಮತ್ತು ಪ್ರತಿಯೊಬ್ಬರಿಗೂ ಅಭಿನಂದನ ಪತ್ರ ವಿತರಿಸಲಾಗುವುದು. ಜ.23ರೊಳಗೆ ದೂರವಾಣಿ ಸಂಖ್ಯೆ 88615 16138 ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಪ್ರಜಾ ಕಲ್ಯಾಣ ಸಮಿತಿ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷ ಟಿ.ಎನ್.ಹರೀಶ್ ತಿಳಿಸಿದರು.

ಸಾಹಿತಿ ರಾಘವೇಂದ್ರ, ನಿರ್ದೇಶಕ ದೇವರತ್ನ ಮಂಜುನಾಥ್, ಮುಖಂಡರಾದ ಎಂ.ಟಿ.ಪ್ರವೀಣ್ ಕುಮಾರ್, ಪ್ರಭು, ರಂಗನಾಥ್, ರಮೇಶ್, ಲಕ್ಷ್ಮಣ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.